ದಾರಿ ತಪ್ಪಿದ್ದ ಮಹಿಳೆಯನ್ನು ಠಾಣೆಗೆ ಕರೆತಂದು ನೆರವು ನೀಡಿದ ಬೆಂಗಳೂರು ಪೊಲೀಸರು

ಬೆಂಗಳೂರು : ಇಂದಿರಾನಗರದ 80 ಫೀಟ್ ರಸ್ತೆಯಲ್ಲಿ ಓರ್ವ ಮಹಿಳೆಯು ಬಹುಕಾಲ ಒಂದೇ ಸ್ಥಳದಲ್ಲಿ ನಿಂತುಕೊಂಡಿದ್ದನ್ನು ಗಮನಿಸಿದ ಸಾರ್ವಜನಿಕರೊಬ್ಬರು, “ನಮ್ಮ-112” ಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿರುತ್ತಾರೆ.

ಕೂಡಲೇ ಕಾರ್ಯಪ್ರವೃತ್ತರಾದ “ನಮ್ಮ-112” ಸಿಬ್ಬಂದಿಯವರು ಹೊಯ್ಸಳ-31ರಲ್ಲಿ ಕರ್ತವ್ಯದಲ್ಲಿದ್ದ ಶ್ರೀ.ಮುರಳಿ, ಎ.ಎಸ್.ಐ ಹಾಗೂ ಶ್ರೀ.ಬೀರಪ್ಪ ಪುಜಾರಿ, ಹೆಚ್.ಸಿ ರವರಿಗೆ ಮಾಹಿತಿಯನ್ನು ರವಾನಿಸಿರುತ್ತಾರೆ. ತಕ್ಷಣ ಹೊಯ್ಸಳ-31ರ ಅಧಿಕಾರಿ/ಸಿಬ್ಬಂದಿಯವರು ಕೇವಲ 13 ನಿಮಿಷದೊಳಗೆ ಸ್ಥಳಕ್ಕೆ ಬಂದು. ಸ್ಥಳದಲ್ಲಿ ನಿಂತಿದ್ದ ಸುಮಾರು 35 ವರ್ಷದ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿ, ಆಕೆಯು ಗುಲ್ಬರ್ಗದಿಂದ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಬೆಂಗಳೂರು ನಗರದ ಪರಿಚಯವಿಲ್ಲದ ಕಾರಣ ನಿಂತಿರುವುದಾಗಿ ತಿಳಿಸಿರುತ್ತಾಳೆ.

ನಂತರ ಆಕೆಯನ್ನು ಮುಂದಿನ ನೆರವು ಹಾಗೂ ಅಗತ್ಯ ಸಹಾಯಕ್ಕಾಗಿ ಇಂದಿರಾನಗರ ಪೊಲೀಸ್ ಠಾಣೆಗೆ ಕರೆತಂದು, ಸಮಯೋಚಿತ ಹಾಗೂ ಮಾನವೀಯವಾಗಿ ನೆರವು ನೀಡಿರುತ್ತಾರೆ.

ಬೆಂಗಳೂರು ನಗರ ಯೋಜನೆಯಡಿಯಲ್ಲಿ ಈ ಘಟನೆಯೂ ಎಲ್ಲಾ ನಾಗರಿಕರ ಸುರಕ್ಷತೆ ಹಾಗೂ ಕಲ್ಯಾಣವನ್ನು ಖಚಿತಪಡಿಸುವ ಸಾರ್ವಜನಿಕರ ಜಾಗೃತಿಯನ್ನು ಮತ್ತು ಬೆಂಗಳೂರು ನಗರ ಪೊಲೀಸರ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ವರದಿ : ಮುಬಾರಕ್

error: Content is protected !!