ಕಾಳಗಿ : ಇಂದು ಬೆಳೆಗ್ಗೆ ನಿಗದಿತ ಸಮಯದೋಳಗೆ ಅಧಿಕ ತೆರಿಗೆ ಹಣ ಸಂಗ್ರಹಿಸುವ ಸಂಬಂಧ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತ್ ವತಿಯಿಂದ ಗುರುವಾರ ನವದಾಗಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ತೆರಿಗೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾನಂದ ಗುತ್ತೇದಾರ, ಗ್ರಾಮ ಪಂ ಕಾರ್ಯದರ್ಶಿ ಶ್ವೇತಾ ಅವಿನಾಶ್ ಗುತ್ತೇದಾರ, ಬಿಲ್ ಕಲೆಕ್ಟರ್ ಅಣ್ಣಪ್ಪ ಬಡಿಗೇರ್, ಶ್ರೀಮತಿ ಅಂಬಿಕಾ ಕಂಪ್ಯೂಟರ್ ಆಪರೇಟರ್,ಗ್ರಾಮ ಪಂ ಸದಸ್ಯರು ಸಿಬ್ಬಂದಿ ಮನೆ ಮನೆಗೆ ತೆರಳಿ ಜನರಿಗೆ ಅರಿವು ಮೂಡಿಸಿ ತೆರಿಗೆ ಸಂಗ್ರಹಿಸಿದರು.
ಮೊದಲನೇ ದಿನ ವಾಗಿರುವದರಿಂದ ಗ್ರಾಮದಲ್ಲಿ 3ತಾಸು ಕಾಲ್ನಡಿಗೆಯ ಅಭಿಯಾನ ನಡೆಸಿ ಮನೆ ಕರ್, ನೀರಿನ ಕರ್,ಅಂಗಡಿ ಹೋಟಲ್, ಪರವಾನಗಿ ನಾವಿಕರಣ ಮತ್ತಿತರ 26100ವಸೂಲಿ ಮಾಡಿ ಮಾಲೀಕರಿಗೆ ರಸೀದಿ ನೀಡಿದರು.
ಸಂತೋಷ ಹೊಸಳ್ಳಿ, ಶಿವಶರಣ ನವದಗಿ,ಅಣ್ಣಾಪ್ಪ ನಾಟಿಕಾರ್, ಮಾರುತಿ ಕೇರಳ್ಳಿ ಖತಲಪ್ಪ ವಜ್ರಗಾಂವ್ ಮಂಜುನಾಥ್ ಕೊರವಿ, ಮಲ್ಲಪ್ಪ ನವದಾಗಿ ಇತರರು ಇದ್ದರು.
ವರದಿ : ರಮೇಶ್ ಕುಡಹಳ್ಳಿ
