ರೈತ ಸೇನೆಯ ವಿವಿಧ ಪದಾಧಿಕಾರಿಗಳ ಸೇನಾನಿಗಳ ನೇಮಕ

ರಾಯಚೂರು: ಜಿಲ್ಲೆಯಲ್ಲಿ 20/12/2025 ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಮರ್ಚೆಡನಲ್ಲಿಯ ಜಿಲ್ಲಾ ಕಾರ್ಯಲಯದಲ್ಲಿ ರಾಜ್ಯ ಉಪಾದ್ಯಕ್ಷರಾದ ಲಕ್ಷ್ಮಿಕಾಂತ ಪಾಟೀಲ್ ಅವರ ಶಿಫಾರಸ್ಸಿನ ಮೆರೆಗೆ ಜಿಲ್ಯಾದ್ಯಕ್ಷರಾದ ಇಂದ್ರಜಿತ್ ಯಾದವ್ ಆದೇಶದ ಮೂಲಕ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮೂಕಪ್ಪ ಮನ್ಸಲಾಪೂರು ಇವರನ್ನು ಹಾಗೂ ಮರ್ಚೆಡ್ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಕರಿಕಾಳ್ ಮತ್ತು ಹೆಚ್.ತಿಮ್ಮಾಪೂರು ಗ್ರಾಮ ಘಟಕದ ಅಧ್ಯಕ್ಷರಾಗಿ ನಾಗರಾಜ ಉಪ್ಪಾರ ಇವರನ್ನು ನೇಮಕಾತಿ ಆದೇಶ ಪತ್ರ ನೀಡಿ ಜಿಲ್ಲಾ ಉಪಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಸಂಘದ ಸಿದ್ದಾಂತ, ನಡುವಳಿಕೆ ನೀತಿ ಹಾಗೂ ಸಂಘಟನೆಯ ಉದ್ದೇಶಗಳಿಗೆ ಭದ್ಧರಾಗಿ ರೈತರ ಪರ ಕರ್ತವ್ಯಗಳನ್ನು ನಿಷ್ಠಯಿಂದ ನೀರ್ವಹಿಸಬೇಕೆಂದು ಸೂಚನೆ ನೀಡಿ ಎಲ್ಲಾ ಹೊಸ ಪದಾಧಿಕಾರಿಗಳಿಗೆ ಸನ್ಮಾನ ಮಾಡಿ ಆದೇಶ ಪತ್ರ ನೀಡಲಾಯಿತು ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಸುರೇಶ್ ಪಿ.ಕೆ., ಕಾರ್ಮಿಕ ಘಟಕದ ಅಧ್ಯಕ್ಷರಾದ ಮಹೇಂದ್ರ ನಾಯಕ,ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆನಂದ ಕುಮಾರ ಮಡಿವಾಳ, ತಾಲೂಕ ಅಧ್ಯಕ್ಷರಾದ ಯಲ್ಲಪ್ಪ ಅಂಬಿಗರ್, ತಾಲೂಕ ಉಪಾಧ್ಯಕ್ಷರಾದ ಬಸವರಾಜ ಉಪ್ಪಾರ,ರೈತ ಮುಖಂಡರಾದ ಕಾಶಪ್ಪ ಮಡಿವಾಳ, ಸದ್ದಾಂ ಕಾಟಿ, ಬುಡ್ಡಪ್ಪ ಹಾಜರಿದ್ದರು.

error: Content is protected !!