ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವದ ಸಮಾರೋಪ ಉದ್ಘಾಟನೆ

ಬೆಳಗಾವಿ : ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಡಾ.ಬಿ.ಎಸ್ ಜಿರಗೆ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ (ಬೆಂಗಳೂರು) ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪ್ರಭಾಕರ್ ಕೋರೆ, ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಶಾಸಕರಾದ ಆಸಿಫ್ ಸೇಠ್, ಎಸ್. ಎಸ್. ಪಾಟೀಲ, ಕಲ್ಲಪ್ಪ ಬಬ್ಬನಗೋಳ, ಮನೋಹರ ಮಸ್ಕಿ, ಎಸ್.ಆರ್.ಸತೀಶ್ಚಂದ್ರ, ಹೆಚ್.ವಿ. ರಾಜೀವ್, ಸಿ.ಎನ್ ಪರಶಿವ ಮೂರ್ತಿ, ಅನೂಪ್ ದೇಶಪಾಂಡೆ, ಜಿ. ನಂಜನಗೌಡ, ವಿಶ್ವನಾಥ ಹಿರೇಮಠ, ಗುರುನಾಥ ಜ್ಯಾಂತಿಕರ್, ಬಿ.ಎಚ್ ಕೃಷ್ಣರೆಡ್ಡಿ, ಸಚಿನ ಪಾಟೀಲ, ಶರಣಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಈ ವೇಳೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರದರ್ಶನ ಹಾಗೂ ‌ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು

error: Content is protected !!