ಖಿದ್ಮಾ ಫೌಂಡೇಶನ್ ಕರ್ನಾಟಕ ಹಾಗೂ ಅನ್ನದಾತ ಪ್ರಕಾಶನ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕನ್ನಡ ಸಂಗಮ ಯಶಸ್ವಿಯಾಗಿ ನಡೆಯಿತು. ಮೈಸೂರಿನ ಸಾಹಿತಿಗಳಾದ ಶ್ರೀ ಮುಹಮ್ಮದ್ ಹುಮಾಯೂನ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಿದರು. ಹಿರಿಯ ಸಾಹಿತಿಗಳ ರಾಧಾಮಣಿ ಎಂ ಕೋಲಾರ್, ಎಚ್.ಬಿ ಯೂಸುಫ್ ಬೆಂಗಳೂರು, ನವೀದ್ ಮುಲ್ಲಾ ಹುಬ್ಬಳ್ಳಿ, ಎಂ.ಬಿ ಸಂತೋಷ್ ಮೈಸೂರು, ಡಾ. ಎಚ್ ಎನ್ ವಿಶ್ವನಾಥ್, ಶಿಕ್ಷಕಿ ನೂರ್ ಅಸ್ಮಾ, ಲೇಖಕರಾದ ಮೆಹಬೂಬ್ ಸಾಹೇಬ್ ವೈ.ಜೆ, ಹಾಶಿಂ ಬನ್ನೂರು, ಖಿದ್ಮಾ ಫೌಂಡೇಶನ್ ಅಧ್ಯಕ್ಷರಾದ ಆಮಿರ್ ಅಶ್ಅರೀ ಬನ್ನೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖಿದ್ಮಾ ಕವಿಗೋಷ್ಠಿ, ಖಿದ್ಮಾ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದವು ಎಂದು ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ತಿಳಿಸಿದ್ದಾರೆ.
