ಕಲಬುರಗಿ:- ಮಾಚ್೯ 12 ರಂದು “ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ’ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅವರು ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇರುವ ನಿಸ್ವಾರ್ಥ ಸಮಾಜದ ಸೇವಕ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಆಯ್ಕೆಯಾಗಿದ್ದಾರೆ. ಇದೇ
ಮಾಚ್೯ – ೧೫ ರಂದು ರವಿವಾರ ದಿನದಂದು ಡಾ.ಅಂಬೇಡ್ಕರ್ ಸಭಾ ಭವನ ಯಲಹಂಕ ಬೆಂಗಳೂರಿನಲ್ಲಿ ಟಿವಿ-೪ ಸುದ್ದಿ ವಾಹಿನಿ, ಶ್ರೀ ಶಿರಡಿ ಸಾಯಿದೀಪ ಮೀಡಿಯಾ ಬ್ರಾಡ್ಕಾಸ್ಟಿಂಗ್ ಸರ್ವಿಸ ಶ್ರೀ ಶಿರಡಿ ಸಾಯಿ ದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿವಿಧ ರೀತಿಯ ಗಣನೀಯ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅನಾಥರಿಗೆ. ವಿಕಲಚೇತನರಿಗೆ. ಪೌರ ಕಾರ್ಮಿಕರಿಗೆ. ಅಂಧರಿಗೆ .ಸಾಧು-ಸಂತರಿಗೆ. ಹಿರಿಯ ವೃದ್ದರಿಗೆ. ಬುದ್ದಿ ಮಾಧ್ಯರಿಗೆ. ಕಟ್ಟಡ ಕಾರ್ಮಿಕರಿಗೆ. ಅನಾಥ ಶಾಲಾ ಮಕ್ಕಳಿಗೆ. ಮೂಕರಿಗೆ. ಹೀಗೆ 1850 ಕ್ಕೊ ಹೆಚ್ಚು ಜನತೆಗೆ ಉಚಿತವಾಗಿ (ಕ್ಷೌರ) ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಈ ವರ್ಷ ಕೊಡುಮಾಡುವ “ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ’ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ, ಡಾ. ಸಾಯಿ ಸತೀಶ ತೋಟಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
