ಹುಕ್ಕೇರಿ: ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕಿನಲ್ಲಿ ಪೋಷಣ ಮಾಸಾಚರಣೆ-2024 ಯೋಜನೆ ಅಡಿಯಲ್ಲಿ ಹುಕ್ಕೇರಿ ನಗರದ ಲಕ್ಷಿದೇವಿ ದೇವಸ್ಥಾನದಲ್ಲಿ ತಾಲೂಕ ಮಟ್ಟದ ಪೋಷಣ ಮಾಸಾಚರಣೆ-2024 ಉದ್ಘಾಟನಾ ಸಮಾರಂಭ ಹಾಗೂ ಸೀಮಂತ , ಅನ್ನ ಪ್ರಾಶಾನ್ನ ,ಗರ್ಭಿಣಿಯರ ಶೀಘ್ರ ನೋಂದಣಿ ಕಾರ್ಯಕ್ರಮನ್ನು ಶ್ರೀ ಕ.ಎಸ್.ರೊಟ್ಟೆರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾ. ಕಾ. ಸೇ. ಸಮಿತಿ ಹುಕ್ಕೇರಿ ಇವರು ಉದ್ಘಾಟಿಸಿದರು. ಶ್ರೀ ಅನಿಷ್ ಎಂ ವಂಟಮುರಿ ಅಧ್ಯಕ್ಷರು ನ್ಯಾಯವಾದಿಗಳ ಸಂಘ, ಹುಕ್ಕೇರಿ ಶ್ರೀ ಡಾ ಉದಯ ಕುಡಚಿ ತಾಲೂಕ ವೈದ್ಯಧಿಕಾರಿಗಳು ಹುಕ್ಕೇರಿ ಶ್ರೀ ಎಸ್ ಜಿ ನದಾಫ್ ಕಾರ್ಯದರ್ಶಿ ನ್ಯಾಯವಾದಿ ಸಂಘ ಹುಕ್ಕೇರಿ ಶ್ರೀ ಬಿ ಎಮ್ ಜಿನರಾಳಿ ಉಪಾಧ್ಯಕ್ಷರು ನ್ಯಾಯವಾದಿ ಸಂಘ ಹುಕ್ಕೇರಿ
ಹಾಗೂ ಶ್ರೀ ಹೊಳೆಪ್ಪ.ಎಚ್. ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳು, ಹಿರಿಯ ಮೇಲ್ವಿಚಾರಕಿಯರು, ಪೋಷಣ ಅಭಿಯಾನ ಯೋಜನೆಯ ತಾಲೂಕ ಸಂಯೋಜಕರು, ಅಂಗನವಾಡಿ ಕಾರ್ಯಕರ್ತೆಯರು, ಎ ಎನ್ ಎಮ್, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಬಾಣಂತಿ, ಮಕ್ಕಳು ಹಾಗೂ ತಾಯಂದಿರು ಹಾಜರಾಗಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ವರದಿ ಸದಾನಂದ ಹೆಚ್