ಇಂದು ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನಿಪ ಧ್ವನಿ ವತಿಯಿಂದ ಆಯೋಜಿಸಲಾಗಿದ್ದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಕೇಕ್ ಕಟ್ ಮಾಡುವುದರ ಮುಖಾಂತರ ಕಾನಿಪ ಧ್ವನಿ ರಾಜ್ಯಾಧ್ಯಕ್ಷರು ಹಾಗೂ ಜರ್ನಲಿಸ್ಟ್ ವಾಯ್ಸ್ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಬಂಗ್ಲೆ ಮಲ್ಲಿಕಾರ್ಜುನ ರವರ 57 ನೇ ಹುಟ್ಟು ಹಬ್ಬದ ಸಂಭ್ರಮವನ್ನು ನೆಲಮಂಗಲ ತಾಲೂಕು ಘಟಕ,ತುಮಕೂರು ಜಿಲ್ಲಾ ಘಟಕ,ಚಿಕ್ಕಬಳ್ಳಾಪುರ ಜಿಲ್ಲಾ ಘಟಕ,ಹೊಸಕೋಟೆ ತಾಲೂಕು ಘಟಕ,ಬೆಂಗಳೂರು ನಗರ ಜಿಲ್ಲಾ ಘಟಕ ಹಾಗೂ ಕೊರಟಗೆರೆ ತಾಲೂಕು ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸುವುದರ ಮುಖಾಂತರ ಆಚರಿಸಕೊಳ್ಳಲಾಯಿತು ಜೊತೆಗೆ ಜಿಲ್ಲಾ ಕಾರ್ಯಕಾರಿಣಿ ಸಭೆಯು ಯಶಸ್ವಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸಿದ್ದರಾಜು ಹಾಗೂ ಪದಾಧಿಕಾರಿಗಳು ಬಂದಂತ ಪತ್ರಕರ್ತರೆಲ್ಲರಿಗೂ ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರರಾಗಿದ್ದು ಇಂದಿನ ವಿಶೇಷವಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ರಾಜ್ಯ ಮಾಧ್ಯಮ ಸಲಹೆಗಾರರು ಹಾಗೂ ನಾಡಿನ ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣರಾವ್, ಜಿಲ್ಲಾ ಗೌರವಾಧ್ಯಕ್ಷರಾದ ಚೌಡೇಗೌಡರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಕೆ.ಮಹೇಶ್, ಕೆ.ಓ.ಮಹೇಶ್,ತಾಲೂಕು ಅಧ್ಯಕ್ಷರಾದ ಬೆಟ್ಟಹಳ್ಳಿರುದ್ರೇಶ್,ಅವಿನಾಶ್,ಅಶ್ವತ್,ಲಕ್ಷ್ಮೀಪತಿ,ಕಾಂತರಾಜ್, ಶ್ರೀನಿವಾಸ, ಶರಣಬಸ್ಸಪ್ಪ,ಮಲ್ಲಣ್ಣ,ವಸಂತ ಆಚಾರಿ,ಸುರೇಶ್,ಸುಪ್ರಿಯ,ಶ್ರೀನಿವಾಸ,ಶ್ರೀಕಾಂತ್, ಶಿವಣ್ಣ,ಕೊರಟಗೆರೆ ಹನುಮಂತರಾಯಪ್ಪ,ನಾರಾಯಣಸ್ವಾಮಿ, ಪ್ರಸನ್ನ ಹಾಗೂ ಇನ್ನೀತರರು ಭಾಗವಹಿಸಿದ್ದರು.