ಹುಕ್ಕೇರಿ:
ಪತ್ರಕರ್ತರ ಧ್ವನಿ ಸಂಘಟನೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಬಂಗ್ಲೆ ಅವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಅವರ ನೇತೃತ್ವದಲ್ಲಿ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ನೆರವೇರಿತು.
ಮೂರು ವರ್ಷಗಳ ಕಾಲ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸುನಿಲ್ ಲಾಳಗೆ ಅವರು ವೈಯಕ್ತಿಕ ಕಾರಣಗಳಿಂದ ಸ್ಥಾನತ್ಯಾಗ ಮಾಡಿದ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಮಹಾಂತೇಶ ಬೇವಿನಕಟ್ಟಿ ಅವರನ್ನು ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಅದೇ ರೀತಿ, ಸಂಘಟನೆಯ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣದಿಂದ ಸಂತೋಷ ಪಾಟೀಲ ಅವರನ್ನು ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದ್ದು, ಖಾಲಿಯಾದ ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕರಾಯಿಗೋಳ ಅವರನ್ನು ನೇಮಕ ಮಾಡಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ ಅವರು, “ಸಂಘಟನೆಯಲ್ಲಿ ನಡೆದ ಹಿಂದಿನ ಘಟನೆಗಳನ್ನು ಕೆಟ್ಟ ಕನಸಿನಂತೆ ಮರೆತು, ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯ ಬೆಳವಣಿಗೆಗಾಗಿ ಶ್ರಮಿಸಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ತಾಲೂಕಿನ ಪ್ರಮುಖ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ ಮತ್ತು ಬಡವರ ಮೇಲಿನ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ಎನ್. ಬಾಳೆಶಗೋಳ, ಜಿಲ್ಲಾ ಗೌರವಾಧ್ಯಕ್ಷ ಶ್ರೀಕಾಂತ್ ಚೌಗಲಾ, ಜಿಲ್ಲಾ ಕಾರ್ಯದರ್ಶಿ ಸದಾಶಿವ ಕಾಂಬಳೆ, ತಾಲೂಕು ಗೌರವಾಧ್ಯಕ್ಷ ರಮೇಶ ತಳವಾರ, ಶಾಂತಿನಾಥ ಮಗದುಮ್ಮ, ಬಸವರಾಜ್ ಖೋತ.ಕಲ್ಲಪ್ಪ ಮಾಳಾಜ, ಸದಾನಂದ ಎಂ.ಎಚ್., ಶಿವಾನಂದ ಮಾಳಕರಿ, ಪ್ರಶಾಂತ್ ಪೋತದಾರ, ಮಹಮ್ಮದ್ ಅರೀಫ್ ಪಠಣ, ಸಚಿನ್ ವಿಟೇಕರ್, ವಿನಾಯಕ ಚೌಗಲಾ, ಶಾಹುಲ್ ನದಾಫ್, ನಾಸೀರ್ ಸುತಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
