ಹಿಂದೂ-ಮುಸ್ಲಿಂ ಐಕ್ಯದ ಪ್ರತೀಕ ಹಜ್ರತ್ ಹಾಜಿ ಸರವರ್ ಉರುಸ್ ಏ.24 ರಂದು

ಚಿಂಚೋಳಿ ತಾಲೂಕಿನ  ಗಡಿಕೇಶ್ವಾರ ಗ್ರಾಮದ  ಹಾಜಿ ಸರವರ್ ಉರುಸ ಏ.24 ರಂದು ಸಡಗರ ಸಂಭ್ರಮದಿಂದ
ಜರುಗಲಿದೆ ಎಂದು ಸಜ್ಜಾದ ನಶೀನ ಮುತ್ತವಲ್ಲಿ ದರ್ಗಾ  ಮಸ್ತಾನ ಅಲಿ ಅಬ್ದುಲಗನಿ
ಪಟ್ಟೇದ್ದಾರ ತಿಳಿಸಿದ್ದಾರೆ.

ಗಡಿಕೇಶ್ವಾರ ಗ್ರಾಮವು ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಸಂಗಮವಾಗಿ
ಪ್ರಸಿದ್ಧಿ ಪಡೆದಿದೆ. ಭಾವೈಕ್ಯತೆಯ ಪ್ರತೀಕವಾದ ಹಾಜಿ ಸರವರ್ ಉರುಸ್   ಸಡಗರ
ಸಂಭ್ರಮದಿಂದ ಜರುಗಲಿದ್ದು,  ಉರುಸ್ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಏಪ್ರಿಲ್ 24ರಂದು ಶುಕ್ರವಾರ ರಾತ್ರಿ 9 ಗಂಟೆಗೆ ಮಸ್ತಾನ ಅಲಿ ಪಟ್ಟೇದ್ದಾರ ಅವರ
ಮನೆಯಿಂದ ಗಂಧದ ಮೆರವಣಿಗೆ ಚಾಲನೆ ನೀಡಲಾಗುವುದು  ವಾದ್ಯಮೇಳಗಳೊಂದಿಗೆ ಗ್ರಾಮದ
ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಈ ಮೆರವಣಿಗೆ ದರ್ಗಾಕ್ಕೆ ತಲುಪಿದ ಬಳಿಕ
ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಗಂಧದ ಕಾರ್ಯಕ್ರಮ ನೆರವೇರಲಿದೆ.

ಏ 25ರಂದು ರಾತ್ರಿ 9 ಗಂಟೆಗೆ ದೀಪೋತ್ಸವ, ಮಿಲಾದುನ್ನಬಿ ಹಾಗೂ ಖವಾಲಿ ಕಾರ್ಯಕ್ರಮಗಳು
ಜರುಗಲಿವೆ. ಏ. 26ರಂದು ಮುಂಜಾನೆ 6 ಗಂಟೆಗೆ ದೇವರ ಪ್ರಸಾದ ವಿತರಣೆ ನಡೆಯಲಿದೆ.

ಉತ್ಸವದ ಸಮಾರೋಪ ಏ. 27ರಂದು ಹರಿಜಾತ್ರೆ ಮೆರೆವಣಿಗೆ ಮುಖಾಂತರ ಪೂನಃ ಮಸ್ತಾನಲಿ
ಅಬ್ದುಗನಿ ಪಟ್ಟೇದ್ದಾರ ಸಜ್ಜಾದ ನಷೀನ ಮುತ್ತವಲ್ಲಿ ಮನೆಗೆ ಮರಳಿ ದೇವರನ್ನು
ತರುವದೊಂದಿಗೆ ಜಾತ್ರೆ ಮುಕ್ತಾಯಗೋಳ್ಳತ್ತದೆ ಎಂದು ಹೇಳಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!