ವಿಜಯಪುರ : ಕೊಲ್ಹಾಪೂರ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠದ ಸನ್ನಿಧಿಯಲ್ಲಿ ನಡೆದ ವಿಜಯಪುರ ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಶಿಬಿರವನ್ನು ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಎಂಬುದು ತತ್ವಾಧಾರಿತ ಸಿದ್ಧಾಂತವುಳ್ಳ ಪಕ್ಷ, ಆದರೆ ಕಾಂಗ್ರೆಸ್ ಪಕ್ಷ ಕೇವಲ ಕುಟುಂಬ ಹಾಗೂ ವೋಟ್ ಬ್ಯಾಂಕ್ ಆಧಾರಿತ ರಾಜಕಾರಣವನ್ನು ಮೈಗೂಡಿಸಿಕೊಂಡಿದೆ, ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿ ಸಿದ್ಧಾಂತದೊAದಿಗೆ ಬದ್ಧವಾಗಿ ನಡೆಯುವ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದರು. ಮುಂಬರುವ ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಸಿದ್ಧರಾಗಬೇಕು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ, ಅಧಿಕಾರ ಕಚ್ಚಾಟದಲ್ಲಿಯೇ ಕಾಂಗ್ರೆಸ್ ತೊಡಗಿದೆ, ಹೀಗಾಗಿ ಬಿಜೆಪಿ ಬಗ್ಗೆ ಜನತೆಯಲ್ಲಿ ಒಲವಿದೆ, ಹೀಗಾಗಿ ಒಗ್ಗಟ್ಟು ಮಂತ್ರ ಜಪಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.
ಬಿಜೆಪಿ ಕಾರ್ಯಕರ್ತರಲ್ಲಿ ಸಂಘಟನಾತ್ಮಕ ಶಕ್ತಿ, ಪ್ರಚಾರ ಕಾರ್ಯವೈಖರಿ ವೃದ್ಧಿಗಾಗಿ ಈ ಪ್ರಶಿಕ್ಷಣಗಳು ಸಹಕಾರಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕನೇರಿ ಕಾಡಸಿದ್ದೇಶ್ವರ ಮಠ ಅಧ್ಯಾತ್ಮಿಕತೆಯ ದಿವ್ಯತೆಯ ಪಾವನ ನೆಲ, ಈ ನೆಲದಲ್ಲಿ ಅದ್ಭುತ ಶಕ್ತಿ ಇದೆ, ಕಾರ್ಯಕರ್ತರು ಈ ಅದ್ಭುತ ಅಧ್ಯಾತ್ಮಿಕತೆಯ ದಿವ್ಯಾನುಭವದಲ್ಲಿ ಪಕ್ಷ ಸಂಘಟನೆಯ ವಿಷಯಗಳನ್ನು ತಿಳಿದುಕೊಳ್ಳಲಿ ಎಂಬ ಆಶಯದಿಂದ ಈ ಬಾರಿ ಈ ಪ್ರಶಿಕ್ಷಣ ಶಿಬಿರವನ್ನು ಮಠದಲ್ಲಿ ಆಯೋಜಿಸಲಾಗಿದೆ ಎಂದರು.
ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಭಾಗ ಸಹ ಪ್ರಭಾರಿ ಬಸವರಾಜ ಯಂಕAಚಿ, ಮಾಜಿ ಸಚಿವರಾದ , ಎಸ್.ಕೆ. ಬೆಳ್ಳುಬ್ಬಿ, ರಮೇಶ ಭೂಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಮೇಯರ್ ಎಂ.ಎಸ್. ಕರಡಿ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಚಿದಾನಂದ ಚಲವಾದಿ, ಅನೀಲ್ ಜಮಾದಾರ, ಮಳುಗೌಡ ಪಾಟಲ, ವೆಂಕಟೇಶ ರಂಗಣ್ಣವರ, ಸಾಬು ಮಾಶ್ಯಾಳ, ಈರಣ್ಣ ರಾವೂರ ವೇದಿಕೆ ಮೇಲೆ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸಿಬಿರಾರ್ಥಿಗಳು ಪಾಲಿಗೆ ಸದಸ್ಯರು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಅಜೀಜ ಪಠಾಣ
