ವಿಜಯಪುರ : ಜಿಲ್ಲೆಯ ತಿಕೋಟಾ ತಾಲ್ಲೂಕಿನ ರೈತ ಕುಟುಂಬವೊಂದು ವಿಜಯಪುರ ನಗರದಲ್ಲಿ ತಾವು ಕಟ್ಟಿಸಿದ ತಮ್ಮ ಹೊಸ ಮನೆಗೆ “ಎಂ.ಬಿ. ಪಾಟೀಲ ನಿವಾಸ” ಎಂದು ಹೆಸರಿಟ್ಟಿರುವ ಸುದ್ದಿ ತಿಳಿದು ನನ್ನ ಮನಸ್ಸನ್ನು ಭಾವುಕವಾಗಿಸಿದೆ ಎಂದು ಎಂ.ಬಿ ಪಾಟೀಲ್ ಹೇಳಿದರು,
ಇದು ಕೇವಲ ನನ್ನ ಹೆಸರಲ್ಲ… ಇದು ರೈತರ ಪ್ರೀತಿ, ವಿಶ್ವಾಸ ಮತ್ತು ಕೃತಜ್ಞತೆಯ ಸಂಕೇತ.
ನಾವು ಮಾಡಿದ ಕೆಲಸವನ್ನು ಮರೆಯುವವರೇ ಹೆಚ್ಚು ಎನ್ನುವ ಕಾಲದಲ್ಲಿ, ನಮ್ಮ ರೈತರು ಮಾತ್ರ ತಾವು ಬೆಳೆದ ಹಣ್ಣು, ತರಕಾರಿ, ಹಾಲು ತಂದು ಪ್ರೀತಿಯಿಂದ ನೀಡುತ್ತಾರೆ. ಈಗ ತಮ್ಮ ಕನಸಿನ ಮನೆಗೂ ನನ್ನ ಹೆಸರಿಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ವಿಜಯಪುರ ನಗರದಲ್ಲಿ ಮನೆ ನಿರ್ಮಿಸಿದ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿಯ ಸಿದ್ದಯ್ಯ, ಸಾತಯ್ಯ, ಬಸಯ್ಯ ಮತ್ತು ಮಲ್ಲಯ್ಯ ಅವರ ಅವಿಭಕ್ತ ಕುಟುಂಬಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಒಂದು ಕಾಲದಲ್ಲಿ ಬರಗಾಲದಿಂದ ತತ್ತರಿಸಿದ್ದ ಈ ನೆಲದಲ್ಲಿ, ಇಂದು ರೈತರು ಕೋಟಿ ರೂಪಾಯಿಗಳ ಆದಾಯ ಗಳಿಸುವ ಮಟ್ಟಿಗೆ ಬೆಳೆದಿದ್ದಾರೆ. ಅದಕ್ಕೆ ನಾವು ಮುತುವರ್ಜಿ ವಹಿಸಿ ಜಾರಿಗೊಳಿಸಿದ ನೀರಾವರಿ ಯೋಜನೆಗಳ ಕೊಡುಗೆ ಮಹತ್ವದ್ದಾಗಿದೆ. ಅನ್ನದಾತನ ಈ ಯಶಸ್ಸು ಮತ್ತು ಕೃತಜ್ಞತೆಯ ಭಾವನೆ ಇನ್ನಷ್ಟು ಸೇವೆ ಮಾಡುವ ಜವಾಬ್ದಾರಿಯನ್ನು ನನ್ನ ಮೇಲೆ ಹೆಚ್ಚಿಸುತ್ತದೆ ಎಂದಿದ್ದಾರೆ,
ಇದು ಕೇವಲ ಒಬ್ಬ ರೈತನ ಯಶಸ್ಸಲ್ಲ ; ನೀರಾವರಿ, ಶ್ರಮ, ಸಂಕಲ್ಪ ಮತ್ತು ವಿಶ್ವಾಸ ಒಂದಾದಾಗ ಸಾಧ್ಯವಾಗುವ ಪರಿವರ್ತನೆಯ ಜೀವಂತ ಸಾಕ್ಷಿ.
ಈ ಪ್ರೀತಿ ನನ್ನನ್ನು ಮತ್ತಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ರೈತರ ಬದುಕು ಇನ್ನಷ್ಟು ಹಸನಾಗುವವರೆಗೆ, ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗುವವರೆಗೆ ನನ್ನ ಸೇವೆಯ ಪಯಣ ನಿರಂತರ ಎಂದು ಬರೆದುಕೊಂಡಿದ್ದಾರೆ.
ವರದಿ : ಅಜಿಜ್ ಪಠಣ
