ಮೈಸೂರು : ಈ ಬಾರಿ ಮೈಸೂರು ದಸರಾ ಅಕ್ಟೋಬರ್ 11ಕ್ಕೆ ಉದ್ಘಾಟನೆ ಆಗಲಿದ್ದು ಇನ್ನು ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ವಿಚಾರಕ್ಕೆ ಮೈಸೂರು ರಾಜ & ಬಿಜೆಪಿ ಸಂಸದ ಯದುವೀರ್ ಒಡೆಯರ್ , ಪ್ರತಿಕ್ರಿಯೆ ನೀಡಿದ್ದು ದಸರಾದಲ್ಲಿ ಕಂಬಳ ಆಯೋಜಿಸಿದ್ರೆ ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ ಎಂದು ಬಿಜೆಪಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.
ದಸರಾದಲ್ಲಿ ಕಂಬಳ ಬೇಡ ಎಂದು ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಕಂಬಳ ವಿಚಾರದಲ್ಲಿ ಅಶೋಕ್ ರೈ ನನಗೆ ಯಾವ ವಿವರಣೆ ನೀಡಿಲ್ಲ. ಆ ವಿಚಾರದ ಬಗ್ಗೆ ನನ್ನ ಜೊತೆ ಯಾವತ್ತು ಏನು ಚರ್ಚೆ ಮಾಡಿಲ್ಲ. ಕಂಬಳದ ಬಗ್ಗೆ ನನಗೆ ಅಶೋಕ್ ವಿವರಣೆ ಕೊಡುವ ಅಗತ್ಯ ಇಲ್ಲ. ದಸರಾ ಸಂಸ್ಕೃತಿಕ ಹಿನ್ನೆಲೆ ಬೇರೆ, ಕಂಬಳವೇ ಬೇರೆ ಮೈಸೂರಿನ ಜನತೆ ಭಾವನೆ ಕೂಡ ಇದೆ.
ಕಂಬಳ ಆಯೋಜಿಸಿದರೆ ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ. ಈ ಸರ್ಕಾರ ಈವರೆಗೂ ಜನರ ಭಾವನೆಯ ವಿರುದ್ಧ ಕೆಲಸ ಮಾಡಿದೆ. ಈ ಕಂಬಳವನ್ನು ಜನರ ಭಾವನೆ ವಿರುದ್ಧವಾಗಿಯೇ ಮಾಡುತ್ತದೆ. ನಾವು ಕಂಬಳಕ್ಕೆ ವಿರುದ್ಧ ಇಲ್ಲ ದಸರಾ ವೇಳೆ ಬೇಡ ಎಂದಿದ್ದೇನೆ. ಇರುವುದು ದಸರಾವನ್ನೇ ಅಚ್ಚುಕಟ್ಟಾಗಿ ಮಾಡಿ ಎಂದು ಬಿಜೆಪಿ ಸಂಸದ ಎದುರು ಒಡೆಯರ್ ತಿಳಿಸಿದರು.
ಮೈಸೂರು ದಸರಾದಲ್ಲಿ ಪಾಸ್ ವ್ಯವಸ್ಥೆಯನ್ನು ರದ್ದು ಮಾಡಿ. ಗ್ಲೋಬಲ್ ಟೆಂಡರ್ ಮೂಲಕ ದಸರಾ ಪಾಸ್ ಹಂಚಿಕೆ ಮಾಡಿ.ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಸಲಹೆ ಕೊಟ್ಟಿದ್ದೇನೆ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.
ದಸರಾ ವೇಳೆ ಪಾಸ್ ಗಳದ್ದೇ ದೊಡ್ಡ ಗದ್ದಲ ನಡೆಯುತ್ತಿದೆ. ಮಾಡುವ ಕೆಲಸ ಬಿಟ್ಟು ಪಾಸ್ ಬಗ್ಗೆ ಜಟಾಪಟಿ ಇರುತ್ತದೆ. ಪಾಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದು ಮಾಡಿ ಎಂದಿದ್ದೇನೆ. ಸರಳ ದಸರಾ ಅಂತಾದ್ರೆ ಪ್ರವಾಸೋದ್ಯಮಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಸರಳ ದಸರಾ ಅನ್ನೋದು ಬೇಡ ಎಂದು ಹೇಳಿದ್ದೇನೆ. ವಿಜೃಂಭಣೆ ಬದಲು ಅರ್ಥಪೂರ್ಣವಾಗಿ ಆಚರಣೆ ಆಗಲಿ ರೈತರು ಸಾರ್ವಜನಿಕರಿಗೆ ಧಕ್ಕೆ ಆಗದಂತೆ ಆಚರಣೆ ಇರಲಿ ಎಂದು ಯದುವೀರ್ ಒಡೆಯರ್ ಹೇಳಿಕೆ ನೀಡಿದರು.
