ಇಂದಿನಿಂದ ಅವುಜೀಕರ ಜ್ಞಾನಯೋಗಾಶ್ರಮದಲ್ಲಿ ಸಪ್ತಾಹ

ಹುಕ್ಕೇರಿ: ಪಟ್ಟಣದ ಹೊರವಲಯದ ಕ್ಯಾರಗುಡ್ಡ

ಬಳಿಯ ಸುಕ್ಷೇತ್ರ ಅವುಜೀಕರ ಜ್ಞಾನಯೋಗಾಶ್ರಮದಲ್ಲಿ ಅವುಜೀಕರ ಮಹಾರಾಜರ ಹಾಗೂ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಸೆ.9 ಮತ್ತು 10ರಂದು ಸಪ್ತಾಹ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಸೆ.9ರಂದು ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು ಸಪ್ತಾಹಕ್ಕೆ ಚಾಲನೆ ನೀಡುವರು. ರಾತ್ರಿ ಭಜನಾ ಮೇಳಗಳಿಂದ ಜಾಗರಣೆ ನಡೆಯಲಿದೆ. ಸೆ.10ರಂದು ಬೆಳಗ್ಗೆ 10ಕ್ಕೆ ಅವುಜೀಕರ ಮಹಾರಾಜರ ಧ್ಯಾನ ಮಂದಿರದ ಉದ್ಘಾಟನೆ ನಡೆಯಲಿದೆ. ಮಠದ ಮುಖ್ಯಸ್ಥ ಮಲ್ಲೇಶ್ವರ ಮಹಾರಾಜರ ನೇತೃತ್ವದಲ್ಲಿ ಮಹಾಪ್ರಸಾದ ಮತ್ತು ಸಪ್ತಾಹ ಸಮಾರೋಪ ಸಮಾ ರಂಭ ಕೊನೆಗೊಳ್ಳಲಿದೆ. ಎರಡು ದಿನದ ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ರಾಯಬಾಗ ಶಾಸಕ ದುರ್ಯೋದನ ಐಹೊಳೆ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಸೇರಿದಂತೆ ಅನೇಕ ಮುಖಂಡರು, ಸಹಸ್ರಾರು ಭಕ್ತರು ಭಾಗವಹಿಸುವರು ಎಂದು ಮಠದ ಉತ್ತರಾಧಿಕಾರಿ ಅಭಿನವ ಮಂಜುನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವರದಿ : ಸದಾನಂದ

error: Content is protected !!