ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಸಾರ್ವಜನಿಕರು ನೀರಿಗಾಗಿ ಪರದಾಟ

ನಿಡಗುಂದಿ: ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದ್ದೇವೆ ಆದರೆ ಅದರ ಬಗ್ಗೆ ಇಲ್ಲಿನ ಅಬಿವೃದ್ಧಿ ಅಧಿಕಾರಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ

ಗೊಳಸಂಗಿ ಗ್ರಾಮದ ವಾರ್ಡ್ ನಂ 5 ರಲ್ಲಿ ಬನಶಂಕರಿ ದೇವಸ್ಥಾನ ಹಿಂದೆ ಇರುವ ಶುದ್ದ ಕುಡಿಯುವ ನೀರಿನ ಘಟಕ ಆರು ತಿಂಗಳಿಂದ ಕೆಟ್ಟು ನಿಂತಿದೆ ಅಧಿಕಾರಿಗಳು ಶುದ್ಧ ಕೂಡಿಯುವ ನೀರಿನ ಘಟಕ ದುರಸ್ತಿ ಮಾಡಲು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಗೊಳಸಂಗಿ ಗ್ರಾಮದಿಂದ ಬಡವಾಣೆಗೆ ಹೋಗಿ ಸುಮಾರು ಒಂದು ಕಿ ಮೀ ಅಧಿಕ ದೂರದಿಂದ ಜನರು ನೀರನ್ನು ತರಬೇಕಾಗಿದೆ ಎಂದು ದೂರಿದ್ದಾರೆ.ಸ್ಥಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಇದರ ಬಗ್ಗೆ ಹೇಳಿದ್ದೇವೆ ಆದರೆ ಅವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ ಧೋರಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ದೂರದ ಬಡಾವಣೆಯಿಂದ ನೀರು ತರುವ ಗೋಳು ತಪ್ಪಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.ಹಾಗೂ ಇದೆ ವಾರ್ಡಿನಲ್ಲಿ ಬರುವ ಆಶ್ರಯ ಯೋಜನೆ ಕಾಲೊನಿಯಲ್ಲಿ ಸರಿಯಾಗಿ ರಸ್ತೆ ದುರಸ್ತಿ ಮಾಡಿಲ್ಲ ಮಳೆಗಾಲದಲ್ಲಿ ಜನರು ತಿರುಗಾಡುವುದು ಕಷ್ಟಕರವಾಗಿದೆ ರಾತ್ರಿಯಾದರೆ ಹುಳು ಹುಪ್ಪಡಿಗಳ ಕಾಟ ಹೆಚ್ಚಾಗಿದ್ದು ಜನರು ಜೀವ ಭಯದಲ್ಲಿಯೇ ತಿರುಗಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಬೀದಿ ದೀಪದ ಕಂಬಗಳನ್ನು ಹಾಕಿ ಕೊಡಿ ಎಂದು ಸ್ಥಳೀಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಹಾವರಗಿ ವಿರುದ್ಧ ಸ್ಥಳಿಯರು ದೂರಿದ್ದಾರೆ

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದಲ್ಲಿರುವ ಸಮಸ್ಯೆಗಳನ್ನು ದುರಸ್ತಿ ಮಾಡದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ ಶಿವ ಪ್ರಸಾದ ಕಾಳಗಿ, ಮಲ್ಲಿಕಾರ್ಜುನ ಕೂಚಬಾಳ, ಮಹಾಂತೇಶ ಕುಂಬಾರ,ಪ್ರವಿನ್ ಪವಾರ್, ವಿಠ್ಠಲ ಗುಡ್ಡದ,ಅರುಣ ಸಾರವಾಡ,ಇರಸಂಗಪ್ಪ ಗುಡ್ಡದ,ರಾಮ ಹರಿ ತುಕ್ಕಾರಾಮ,ಪವಾರ್, ಸತೀಶ್ ಪವಾರ್,ಕೀರಣ ಜಮಖಂಡಿ, ವಿಜಯ ಜಮಖಂಡಿ,ಚೇತನ ಜಮಖಂಡಿ ಇದ್ದರು

ಗ್ರಾಮದಲ್ಲಿ ಆರು ತಿಂಗಳಿಂದ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ ಧೋರಣೆ ಮಾಡುತ್ತಿದ್ದಾರೆ ಇದೆ ರೀತಿ ಮುಂದುವರೆದರೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ
-ಅರುಣ ಕಲ್ಲಪ್ಪ ಸಾರವಾಡ- ವಾರ್ಡಿನ ನಿವಾಸಿ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡದೆ ಇರುವುದರಿಂದ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದರು ಆತ ಬಂದು ದುರಸ್ತಿ ಮಾಡುತ್ತಿಲ್ಲ ಇದನ್ನು ಬೇರೆಯವರಿಗೆ ಟೆಂಡರ್ ನೀಡಿದ್ದೇವೆ ಶಿಘ್ರದಲ್ಲಿ ದುರಸ್ತಿ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ
ವ್ಹಿ ಬಿ ಗೊಂಗಡಿ – ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.

 

ವರದಿ : ಸದಾಶಿವ್ ಮೇಲಿನಮನಿ 

error: Content is protected !!