ದಲಿತ ಯುವಕನ ಮೇಲೆ ಹಲ್ಲೆ ಭಾರತ ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷ ಖಂಡನಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ ಭಾರತ ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷ ಸಮಿತಿಯಿಂದ ತಹಸೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಮೂಲಕ ಮುಖ್ಯಮಂತ್ರಿಗೇ ಮನವಿ.

 

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲಾಟ ಗ್ರಾಮದಲ್ಲಿ ದಿನಾಂಕ 10-09-2024 ರಂದು ಅದೇ ಗ್ರಾಮದ ಒಬ್ಬ ದಲಿತ ಯುವಕ ದೇವಾಲಯ ಪ್ರವೇಶಿಸಿದ್ದನೆಂದು ಆತನನ್ನು ಥಳಿಸಿರುವ ಘಟನೆ ನಿಜಕ್ಕೂ ಅಮಾನವೀಯ. ಎಲ್ಲ ದೇವರು ಒಂದೇ ದೇವನೊಬ್ಬ ನಾಮ ಹಲವು ಎಂದು ನಂಬಿದ ಜಾತ್ಯಾತೀತ ಭಾರತದಲ್ಲಿ ಇಂತಹ ಘಟನೆಗಳು ನಿಜಕ್ಕೂ ನಾಚಿಕೆ ತರುವಂತದ್ದು.

 

ಉಗಲಾಟ ಗ್ರಾಮದ ದ್ಯಾಮವ್ವನ ಗುಡಿಗೆ ಪ್ರವೇಶಿಸಿ ದೇವಿಗೆ ನಮಸ್ಕಾರ ಮಾಡಿ ಹೊರಗೆ ಬಂದಿರುವ ಅರ್ಜುನ ಮಾದರ ಎಂಬ ಯುವಕನನ್ನು ಅಲ್ಲಿಯೇ ಹರಟೆ ಹೊಡೆಯುತ್ತಾ ಕುಳಿತಿರುವ ಸವರ್ಣಿಯರು ಏಕಾಏಕಿ ದಲಿತ ಯುವಕನ ಎರಗಿ ಯಾರಿಗೆ ಕೇಳಿ ಗುಡಿ ಒಳಗೆ ಪ್ರವೇಶ ಮಾಡಿದೆಯೋ ಮಗನೆ! ಎಂದು ಕಂಬಕ್ಕೆ ಕಟ್ಟಿ ಹೊಡೆದಿರುವ ಘಟನೆಯನ್ನು ಸಿಪಿಐ(ಎಮ್) ಪಕ್ಷದ ರಾಮದುರ್ಗ ತಾಲೂಕಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಹಾಗೂ ಸವರ್ಣಿಯರ ಏರಿಯಾಗೆ ದಲಿತರು ಬರಬಾರದೆಂದು ಡಂಗುರ ಸಾರಿರುವ ಸವರ್ಣಿಯರ ನೀತಿ ನಿಜಕ್ಕೂ ಮಾನವ ಕುಲಕ್ಕೆ ನಾಚಿಕೆ ಬರುವಂತದ್ದು.

 

ಗುಡಿ ಪ್ರವೇಶ ಮಾಡಿದ ಯುವಕನ ಮೇಲೆ ಹಲ್ಲೆ ಮಾಡಿದ್ದಷ್ಟೇ ಅಲ್ಲದೇ, ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ದುರದ್ರುಷ್ಟಕರ. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.

 

ಇತ್ತೀಚೆಗೆ ಕೊಪ್ಪಳ ಜಿಲ್ಲೆ ಸಂಕನಾಳ ಗ್ರಾಮದ ದಲಿತ ಯುವಕನನ್ನು ಕ್ಷೌರ ಮಾಡಿಸಿಕೊಳ್ಳಲು ಹೋದಾಗ ಕೊಲೆಯಾಗಿದ್ದು, ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಾಗ, ಈ ಕುರಿತು ಪೋಲೀಸ್ ಕಂಪ್ಲೆಂಟ್ ಕೊಡಲು ಸಾಮಾಜಿಕ ಬಹಿಷ್ಕಾರ ಹಾಕುವುದು ನಡೆದಿದೆ. ಈ ರೀತಿ ನಡೆದರೆ ದಲಿತರ ರಕ್ಷಣೆ ಹೇಗೆ ಸಾಧ್ಯ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಹಾಗೂ ಉಗಲಾಟ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ ದುಷ್ಪರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಸರಕಾರ ಕೂಡಲೇ ಕ್ರಮವಹಿಸಬೇಕೆಂದು ಸಿಪಿಐ(ಎಮ್) ಪಕ್ಷದ ರಾಮದುರ್ಗ ತಾಲೂಕ ಸಮಿತಿ ಒತ್ತಾಯಿಸಿದರು.

 

ಬೆಳಗಾವಿ ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಜಿ.ಎಮ್.ಜೈನಖಾನ್,ಕಾರ್ಮಿಕ ಮುಖಂಡ,ನಾಗಪ್ಪ ಸಂಗೊಳ್ಳಿ, ಫಾರೂಕ್ ಶೇಕ್,ದಲಿತ ಮುಖಂಡ, B R ದೊಡಮನಿ, ಮಹಿಳಾ ಸಂಘಟನೆಯ ಮುಖಂಡಿಯರು ಇನ್ನಿತರರು ಉಪಸ್ಥಿತರಿದ್ದರು.

 

ವರದಿ md ಸೋಹಿಲ್ ಭೈರಕದಾರ

error: Content is protected !!