ಪ್ರಧಾನಿ ಮೋದಿ ಅಟಲ್ ಜಿ ಯವರ ಮಾರ್ಗದಲ್ಲಿ ಸಾಗುತ್ತಿದ್ದಾರೆ
ಹುಮನಾಬಾದ : ಕಾಂಗ್ರೆಸ್ ಸರ್ಕಾರ ಇದ್ದಾಗ 18ನೇ ಸ್ಥಾನಕ್ಕೆ ಇದ್ದ ಭಾರತ ದೇಶದ ಎಕನಾಮಿ ಪ್ರಧಾನಿ ನರೇಂದ್ರ ಮೋದಿ ರವರು ಪ್ರಧಾನಮಂತ್ರಿ ಯಾಗಿ ಅದನ್ನ 3ನೇ ಸ್ಥಾನಕ್ಕೆ ತಂದಿದ್ದಾರೆ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದು ಹುಮನಾಬಾದ ಶಾಸಕ ಡಾ ಸಿದ್ದು ಪಾಟೀಲ್ ಹೇಳಿದರು,
ಕ್ಷೇತ್ರದ ಚಿಟಗುಪ್ಪಾ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಹಾಗೂ ಒಂದೇ ಮಾತರಂ 150ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ದೇಶಕ್ಕೆ ಅಪಾರ ವಾಗಿದೆ ಇವತ್ತು ನ್ಯಾಷನಲ್ ಹೈವೇ ಮೂಲಕ ಗಂಟೆಗಟ್ಟಲೆ ಸವಾರಿ ಮಾಡಿ ತಲುಪ ಬೇಕಿದ್ದ ದಾರಿ ಕೆಲವೇ ನಿಮಿಷಗಳಲ್ಲಿ ತಲುಪುವಂತೆ ಇದು ಕೂಡ ಅಟಲ್ ಬಿಹಾರಿ ವಾಜಪೇಯಿ ರವರ ಕೊಡುಗೆ ಯಾಗಿದೆ ಅನ್ನ ಭಾಗ್ಯ ಕಾಂಗ್ರೆಸ್ ನವರು ನಾವು ತಂದಿವಿ ನಾವು ಕೊಟ್ಟಿವಿ ಅಂತಾರೆ ಆದರೆ ಅನ್ನಭಾಗ್ಯ ಯೋಜನೆ ಬಡ ಕುಟುಂಬ ಗಳಿಗೆ 5ಕೆಜಿ ಅಕ್ಕಿ ನೀಡುವ ಯೋಜನೆ ತಂದಿದ್ದು ಅಟಲ್ ಜಿ ರವರ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು,
ಯುವಕರು ಇಂದು ಅಟಲ್ ಜಿ ಅವರ ಮಾರ್ಗದಲ್ಲಿ ನಡೆಯಬೇಕಾಗಿದೆ ನಾನು ಕೂಡ ಅವರ ಮಾರ್ಗದಲ್ಲೇ ಅಭಿವೃದ್ಧಿ ಮಾಡುತಿದ್ದೇನೆ ನಾನು ಶಾಸಕ ನಾದ ನಂತರ ಇಲ್ಲಿನ ಬಹುದಿನಗಳ ಬೇಡಿಕೆ ಮಿನಿ ವಿಧಾನ ಸೌಧ ಕೆಲಸ ಪ್ರಾರಂಭ ವಾಗಿದೆ ಅದಲ್ಲದೆ ತಾಲೂಕು ಕಛೇರಿ ಮತ್ತು ಯುವಕರ ಬೇಡಿಕೆ ಆಟದ ಮೈದಾನ ಇದೆ ಅದಕ್ಕೂ ಸರ್ಕಾರದಿಂದ ಭೂಮಿ ಸಿಕ್ಕಿದೆ ಅದು ಕೂಡ ಪೂರ್ಣ ಗೊಳ್ಳುತ್ತದೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಳಕರ್, ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್, ಬಸವರಾಜ್ ಆರ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಅನಿಲ್ ಪಸಾರ್ಗಿ, ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
