ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಾಲಯದಲ್ಲಿ ಸಿಂಹ ತಪ್ಪಿಸಿಕೊಂಡಿದ್ದರಿಂದ ಭಾರಿ ಅನಾಹುತದಿಂದ ಅಧಿಕಾರಿಗಳು ತಪ್ಪಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ತುಟಿ ಮಾತ್ರ ಬಿಚ್ತಾಯಿಲ್ಲಾ..
ಘಟನೆ ನಡೆದಿದ್ದು ಹೀಗಂತೆ: ಪ್ರತಿದಿನದಂತೆ ಅಂದು ಕೂಡಾ ಸಿಂಹವನ್ನು ಬೋನಿನಿಂದ ಹೊರಗೆ ಬಿಡಬೇಕಾಗಿತ್ತು ಹೇಗೋ ಎನೋ ಸಿಂಹವು ಸಿಬ್ಬಂಧಿಯ ಅಜಾಗರೂಕತೆಯಿಂದಾಗಿ ಹೊರಗೆ ಬಂದಿದೆ. ಹೊರಗೆ ಬಂದಿದ್ದರಿಂದ ಅಲ್ಲಿನ ಸಿಬ್ಬಂಧಿ ಪರಾರಿಯಾಗಿದ್ದಾರೆ. ಕೊನೆಗೆ ಪ್ರಾಣಿ ಸಂಗ್ರಾಲಯದ ಮುಖ್ಯದ್ವಾರನ್ನು ಮುಚ್ಚಲು ಆದೇಶ ಮಾಡಲಾಗಿತ್ತಂತೆ. ಹೀಗಾಗಿ ಅಂದು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಸಿಂಹವನ್ನು ಹಿಡಿಯಲು ಅಧಿಕಾರಿಳು ತಿಣಕಾಡಿದ್ದಾರೆಂದು ತಿಳಿದು ಬಂದಿದೆ.
ಬೆಚ್ಚಿಬಿದ್ದ ಸಿಬ್ಬಂಧಿ: ಹೇಗಾದರು ಮಾಡಿ ಸಿಂಹವನ್ನು ಹಿಡಿಯಬೇಕು ಎಂದು ನಿರ್ದಾರ ಮಾಡಿದ್ದರಿಂದ ಕೊನೆಗೆ ರಾತ್ರಿ ಸಮಯ ಆಗುತ್ತಿದಂತೆ ಸಿಂಹಕ್ಕೆ ಚುಚ್ಚು ಮುದ್ದು ನೀಡಿದ್ದರಿಂದ ನಶೆ ಆದ ಮೇಲೆ ಬೋನಿಗೆ ಹಾಕಲಾಗಿದೆಯಂತೆ.
ಒಂದೊಮ್ಮೆ ಈ ಸುದ್ಧಿ ಸುಳ್ಳಾಗಿದ್ದರೆ ಅರಣ್ಯಾಧಿಕಾರಿಗಳೇ ಸ್ಪಷ್ಟನೇ ಕೊಡ್ತಾ ಕೊಡಬೇಕಾಗಿತ್ತು. ಆದರೆ ಸೈಲೆಂಟಾಗಿದ್ದನ್ನು ನೋಡಿದರೆ ಸುದ್ಧಿ ಸುಳ್ಳಲ್ಲಾ ಸತ್ಯ ಅನ್ನೊದು ಕನ್ಪರ್ಮ.
ಇಷ್ಟೆಲ್ಲಾ ರದ್ದಾಂತವಾದರೂ ಅಧಿಕಾರಗಳು ತುಟಿ ಬಿಚ್ಚಿತ್ತಿಲ್ಲಾ ಅನ್ನೋದು ವಿಪರ್ಯಾಸ ಅಂದರೆ ತಪ್ಪಾಗಲಾರದು..
ವರದಿ : ಸದಾನಂದ ಎಂ ಎಚ್