ತುಮಕುಂಟಾ ಗ್ರಾಮದ ಮುಖ್ಯ ರಸ್ತೆಯು ಜೆಜೆಮ್ ಕಾಮಗಾರಿ ಕಳಪೆ

ಚಿಂಚೋಳಿ ತಾಲೂಕಿನ ಸಾಲೆಬೀರ ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತುಮಕುಂಟಾ ಗ್ರಾಮದ ಮುಖ್ಯ ರಸ್ತೆಯು ಜೆಜೆಮ್ ಕಾಮಗಾರಿ ಕಳಪೆಯಾಗಿ ಮಾಡಿರುತ್ತಾರೆ ಈ ಅಪೂರ್ಣ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಚರಂಡಿ ಕಾಲುವೆಗಳು ಕೂಡ ಹದಗೆಟ್ಟಿದ್ದು, ಗಬ್ಬೆದ್ದು ರಸ್ತೆಯ ಮೇಲೆ ಹರಿಯತ್ತಿದ್ದು, ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿದ್ದೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದೇ ಗಾಢ ನಿದ್ದೆಯಲ್ಲಿ ಮುಳಗಿದ್ದು, ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣ ಗೊಳಿಸಿ ಚರಂಡಿಗಳನ್ನು ಸ್ವಚ್ಛತೆ ಮಾಡಬೇಕೆಂದು ಪಾಂಡು ರಂಗ. ಡಿ. ಮಿತ್ರಾ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮಂತ ಎನ್. ಠಾಕುರ, ಗುಂಡಪ್ಪ ಅವುಂಟಿ, ನಾಗಪ್ಪ ದಂಡನಿ, ಸಿದ್ದು, ಬಲ್ಲಪ್ಪ, ಅಂತಪ್ಪ್, ಮಗಲ್ಲಪ್ಪ ತಿರಲಾಪುರ, ಉಪಸ್ಥಿತರಿದ್ದರು.

 

ವರದಿ,: ರಾಜೇಂದ್ರ ಪ್ರಸಾದ್ ಜೆಕೆ ನ್ಯೂಸ್ ಚಿಂಚೋಳಿ