ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕರಾದ ದೇವಾನಂದ ಚವ್ಹಾಣ ನೇತೃತ್ವದಲ್ಲಿ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ ವಿರುದ್ಧ ಪ್ರತಿಭಟನೆ

ವಿಜಯಪುರ – ನಾಗಠಾಣ ಮತಕ್ಷೇತ್ರದ ಜೆ.ಡಿ.ಎಸ್. ಪಕ್ಷದ ವತಿಯಿಂದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕರಾದ ದೇವಾನಂದ ಚವ್ಹಾಣ ನೇತೃತ್ವದಲ್ಲಿ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

 

ಜಾತ್ಯಾತೀತ ಜನತಾದಳ ವಿಜಯಪುರ ತಾಲೂಕಾ ಅಧ್ಯಕ್ಷರಾದ ನಿಂಗನಗೌಡ ಎಸ್. ಸೋಲಾಪೂರ ಮಾತನಾಡಿ ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಅವಹೇಳನಕಾರಿ ಪದ ಬಳಸಿರುವ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರ ಹೇಳಿಕೆಯಿಂದ ಕರ್ನಾಟಕದ ಕೊಟ್ಯಾಂತರ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದು.

 

ಅಷ್ಟೆ ಅಲ್ಲ ರಾಜ್ಯ ಎರಡು ಬಾರಿ ಮುಖ್ಯಮಂತ್ರಿಯಾದವರು ಕೇಂದ್ರ ಸಚಿವರ ಬಗ್ಗೆ ಇತರಹ ಮಾತನಾಡುವವರು ಸಾಮಾನ್ಯ ಜನರ ಹಿತ ಹೇಗೆ ಕಾಪಾಡುತ್ತಾರೆ

 

ಕರ್ನಾಟಕ ಪೋಲಿಸರಿಗೆ ದೇಶದಲ್ಲೆ ಮಹತ್ವದ ಗೌರವ ಇದೆ ಅಂತಹ ಕರ್ನಾಟಕದ ಪೋಲಿಸ ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ ಅವರು ಈ ರೀತಿ ಭಾಷೆ ಬಳಸಿರುವುದು ನಿಜಕ್ಕೂ ಆಘಾತಕಾರಿ

 

ಕೇಂದ್ರ ಸಚಿವರಾದ ಕುಮಾರಸ್ವಾಮಿ ರವರ ಬಗ್ಗೆ ಈ ರೀತಿ ಮಾತನಾಡಿರುವ ಚಂದ್ರಶೇಖರ ಅವರನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತುಕ್ರಮಕೈಕೊಳ್ಳಬೇಕಾಗಿ ಆಗ್ರಹಿಸುತ್ತೇವೆ.

 

ಈ ಸಂದರ್ಭದಲ್ಲಿ ಎಸ್.ವಿ. ಪಾಟೀಲ, ನಾನಾಗೌಡ ಕಳಸಗೊಂಡ, ಕಾಮನಗೌಡ ಪಾಟೀಲ, ಶಿವು ಬಂಡಿ, ರವಿ ಚವ್ಹಾಣ, ಸುಜಾತಾ ಕಣಬೂರ, ಕಲ್ಲು ಬಳ್ಳಾರಿ, ಆಶಾರಾಣಿ ಹಿರೇಕುರಬರ, ಇಂದ್ರಾಬಾಯಿ ಹಜೇರಿ, ಪ್ರಕಾಶ ರಜಪೂತ, ಶಿವು ಹಿರೇಕುರಬರ, ಸಂಗಮೇಶ ಹಡಪದ, ಭೀಮರಾಯ ಇಬ್ರಾಹಿಂಪೂರ, ರಾಮು ತೊನಶ್ಯಾಳ, ದಿಲೀಪ ರಾಠೋಡ, ಮಲ್ಲು ತೊರವಿ, ಸುಭಾಸ ನಾಯಕ, ಸಂಜು ದೊಡಮನಿ, ಪೀರಬಾಶಾ ಗಚ್ಚಿನಮಹಲ, ಪುಂಡಲೀಕ ವಾಲಿಕಾರ, ಸೈಯ್ಯದಸಿಕಂದರ ಶಿರನಾಳ, ಬಸಲಿಂಗಪ್ಪ ಸಾರವಾಡ ಮತ್ತಿತರರು ಉಪಸ್ಥಿತರಿದ್ದರು.