ಕನ್ನಡ ಜ್ಯೋತಿ ರತೆಯಾತ್ರೆಗೆ ಭವ್ಯವಾಗಿ ಸ್ವಾಗತಿಸೋಣ – ಶಾಲಿವಾನ್ ಉದಗೀರೆ

ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20,21,22, ರಂದು ಜರಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಇದೇ ತಿಂಗಳು 13 ರಂದು ಔರಾದ ಪಟ್ಟಣಕ್ಕೆ ಆಗಮಸಲಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಗೆ ಭವ್ಯವಾಗಿ ಸ್ವಾಗತಿಸೋಣ ಎಂದು ತಹಸಿಲ್ದಾರ್ ಮಲ್ಲಶೆಟ್ಟಿ ಚಿದ್ರೆ ಹೇಳಿದರು.

 

ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯ ಪೂರ್ವಭಾವಿ ಸಭೆ ಜರುಗಿತು.

 

ಕನ್ನಡ ಜ್ಯೋತಿ ರಥಯಾತ್ರೆವು ಐತಿಹಾಸಿಕ ಯಾತ್ರೆಯಾಗಿದ್ದು , ರಾಜ್ಯದಾದ್ಯಂತ ಯಾತ್ರೆ ಜರುಗುತ್ತಿದ್ದು ಮೂರು ರಾಜ್ಯಗಳ ನಮ್ಮ ಗಡಿ ಜಿಲ್ಲೆಗೆ ಆಗಮಿಸಿ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಚಲಿಸುತ್ತಿರುವುದು ಅತ್ಯಂತ ಹರ್ಷದ ವಿಚಾರ, ಔರಾದ ಪಟ್ಟಣಕ್ಕೆ ಕಮಲನಗರ ದಿಂದ ದಿ.12 ರಂದು ರಾತ್ರಿ ಆಗಮಿಸಿ, ದಿ.13 ಬೆಳಗ್ಗೆ 9:30 ರಿಂದ ಬಸವೇಶ್ವರ ವ್ರತದಿಂದ ಪೂಜೆ ಸಲ್ಲಿಸಿ ಚಾಲನೆ ನೀಡಿ ಕನ್ನಡಾಂಬೆ ವೃತ್ತದ ವರೆಗೆ ಒಂದು ಕಿಲೋಮೀಟರ್ ರಥಯಾತ್ರೆ ನಡೆಯಲಿದ್ದು. ಕನ್ನಡ ಅಭಿಮಾನಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಚಿಂತಕರು,ಹೋರಾಟಗಾರರು,ಕವಿಗಳು, ತಾಲೂಕಿನ ಅಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಎಲ್ಲ ಕನ್ನಡ ಮನಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸ್ವಾಗತ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಶಾಲಿವಾನ ಉದಗಿರೆ ತಿಳಿಸಿದರು,

 

ತಾಲೂಕು ಪಂಚಾಯತ ಇಒ ಮಾಣಿಕರಾವ ಪಾಟೀಲ, ಸಿಪಿಐ ರಘುವೀರಸಿಂಗ ಠಾಕೂರ, ಟಿಎಚ್ಒ ಡಾ ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಇಮಾಲಪ್ಪ, ಖಜಾನೆ ಅಧಿಕಾರಿ ಮಾಣಿಕ ನೇಳಗೆ, ಹಿಂದುಳಿದ ವರ್ಗಗಳ ತಾಲೂಕ ಅಧಿಕಾರಿ ರವೀಂದ್ರ ಮೇತ್ರೆ, ಮೀನುಗಾರಿಕೆ ಸಹಾಯಕ ನಿರ್ದೇಶಕ ಗಣೇಶ್, ಅಂಬದಾಸ್ ನಳಗೆ, ದೇವಿದಾಸ್ ಮಡಿವಾಳ, ಪ್ರವೀಣ್ ಕೋಳೆಕರ್, ಕರವೇ ರಾಜು ಯಡವೆ, ಶಂಕು ನಿಸ್ಪತ್ತೆ, ಅನಿಲ ಹೆಡೆ, ಅನಿಲ ದೇವಕತ್ತೆ, ಸುನಿಲ ಮಿತ್ರಾ, ರತ್ನದೀಪ ಕಸ್ತೂರೆ , ಅಧಿಕಾರಿಗಳು ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

 

ವರದಿ : ರಾಚಯ್ಯ ಸ್ವಾಮಿ