ಅರೆ ಬೆತ್ತಲೆ ಪ್ರತಿಭಟನೆಯಲ್ಲಿ ತಾಲೂಕಿನಿಂದ ಸುಮಾರು 500 ರಿಂದ 1000ವರೆಗೆ ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ ಆಕಾಶ ಕೊಳ್ಳುರ

ಚಿಂಚೋಳಿ : ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮಾಜದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಪುರಸಭೆ ಮಾಜಿ ಉಪಾಧ್ಯಕ್ಷರು ಜಗನ್ನಾಥ ಕಟ್ಟಿ ಮಾತನಾಡಿ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈಗಾಗಲೇ ಆರನೇ ಗ್ಯಾರಂಟಿ ಎಂಬಂತೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿ
ಇಲಿಯವರೆಗೆ
ಜಾರಿ ಮಾಡದೆ ಇರುವುದು ಬೇಸರದ ಸಂಗತಿಯಾಗಿದ್ದು ಕೂಡಲೇ ಜಾರಿ ಮಾಡುವಂತೆ ಆಗ್ರಹ ಮಾಡುತ್ತೇವೆ ಹಾಗೆ ನಮ್ಮ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡುತ್ತಾರೆ ಎಂಬ ಆಶಯವಿದೆ, ಹೀಗೆ ನಿರಂತರವಾಗಿ ಉದಾಸೀನತೆ ತೋರುವುದು ಸರಿಯಲ್ಲ ಬೇಗ ಜಾರಿ ಮಾಡದೆ ಹೋದರೆ ಮುಂದೆ ನಿರಂತರವಾಗಿ ಹೋರಾಟಗಳು ಮಾಡಲಾಗುವುದು ಅನುಗುಣ ವಾಗುವಂತೆ ಆಗಸ್ಟ್ 1 ರಂದು ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಬೆತ್ತಲೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಮಾದಿಗ ಸಮಾಜ ಮುಖಂಡ ಆಕಾಶ ಕೊಳ್ಳುರು ಮಾತನಾಡಿ ಮಾದಿಗ
ಸಮಾಜದ ವತಿಯಿಂದ 1 ಆಗಸ್ಟ್ ರಂದು ಕಲ್ಬುರ್ಗಿಯಲ್ಲಿ ನಡೆಯಲಿರುವ ಒಳಮೀಸಲಾತಿ ಜಾರಿಗೆಗಾಗಿ ನಡೆಯುವ ಅರಬೆತ್ತಲೆ ಪ್ರತಿಭಟನೆಯಲ್ಲಿ ಭಾಗವಹಿಸಲು ತಾಲೂಕಿನಿಂದ ಸುಮಾರು 500 ರಿಂದ 1000ವರೆಗೆ ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ, ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಯಾವುದೇ ಪಕ್ಷದವರಾಗಿರಲಿ ನಮ್ಮ ಸಮಾಜದ ಬಗ್ಗೆ ಉದಾಸೀನತೆ ತೋರುವುದು ಸರಿಯಲ್ಲ ಮೀಸಲಾತಿ ನಮ್ಮ ಹಕ್ಕು ನೆರೆಯ ತೆಲಂಗಾಣ ಛತ್ತೀಸ್ಗಡ್ ಇನ್ನಿತರ ರಾಜ್ಯಗಳಲ್ಲಿ ಮೀಸಲಾತಿ ಜಾರಿ ಮಾಡಿದ್ದು ನಮ್ಮ ಕರ್ನಾಟಕದಲ್ಲಿ ಜಾರಿ ಮಾಡಲು ಮೀನಾ ಮೇಷ ಮಾಡುತ್ತಿದ್ದಾರೆ ಇದನ್ನು ನಾವು ಸಹಿಸುವುದಿಲ್ಲ ಆದಷ್ಟು ಬೇಗ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ
ಶಾಮರಾವ ಓಂಕಾರ
ಸುರೇಶ್ ಸೇರಿಕಾರ,
ಪ್ರದೀಪ್ ಮೇತ್ರಿ,
ನಾಗಾರ್ಜುನ ಕಟ್ಟಿ,
ಮಚೆಂದ್ರ ಸೇರಿಕಾರ,
ಜಗನ್ನಾಥ ಚಿಮ್ಮನಚೋಡ,
ರೇವಣಸಿದ್ಧ ಚಿಮ್ಮನಚೋಡ,
ರಾಜಶೇಖರ ದಂಡಿನ,
ಮಚೇಂದರ ಸೇರಿಕಾರ,
ನಾಗು ಕಿವಣನೂರು,
ಸೋಮಶೇಖರ ಗಡಿನಿಂಗದಳ್ಳಿ,
ರವಿ ಗುಪ್ತ,
ರಮೇಶ್ ನೋತಿಹೊಲ,
ರಾಘವೇಂದ್ರ ಶೇರಿಕರ,
ಹಣಮಂತ ಬೀರನಳ್ಳಿ,
ವಿಶಾಲ್ ಸುಗಂಧಿ,
ಪ್ರೇಮ ಗೌನಳ್ಳಿ,
ಅನಿಲ ಕ್ರಾಂತಿ,
ಮೋಹನ್ ಐನಾಪುರ,ಹಾಗೂ ಮಾದಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!