ಒಳ ಮೀಸಲಾತಿ ಜಾರಿ ವಿಳಂಬ ನೀತಿ ಖಂಡಿಸಿ ಕಲ್ಬುರ್ಗಿ ಚಲೋ

ಕಾಳಗಿ : ತಾಲೂಕಿನ ಮಾದಿಗ ಸಮುದಾಯದ ಕುಲಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ, ಬಹುದಿನದ ಬೇಡಿಕೆಯಾದ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿಗೆ ಸುಮಾರು 30 ವರ್ಷ ಹೊರಟ ಮಾಡುತ್ತಾ ಬಂದಿದ್ದು, ಇದನ್ನ ಪರಿಗಣಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದು, ನ್ಯಾಯಾಲಯವು ತೀರ್ಪು ನೀಡಿ ಒಂದು ವರ್ಷ ಗತಿಸಿದರು ಸರ್ಕಾರದ ವಿಳಂಬ ನೀತಿ ಖಂಡಿಸಿ ರಾಜ್ಯದ್ಯಂತ *ಅಗಸ್ಟ್ 1* ರದ್ದು ಜಿಲ್ಲಾಧಿಕಾರಿಗಳ ಕಚೇರಿಗಳ ಎದುರುಗಡೆ ಅರೆಬೆತ್ತಲೆ ಯಾಗಿ ಮೆರವಣಿಗೆ ಮಾಡಿ ಸರ್ಕಾರವನ್ನು ಎಚ್ಚರಿಸಲು ನಮ್ಮ ತಾಲೂಕಿನ ಸಮುದಾಯದ ಮುಖಂಡರುಗಳು ಬುದ್ಧಿಜೀವಿಗಳು ವಿವಿಧ ಮಾದಿಗ ಪರ ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಬುರ್ಗಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಯಶಸ್ಸು ಮಾಡಲು ಪಕ್ಷತೀತ ವಾಗಿ ಹೋರಾಟಕ್ಕೆ ಹೆಚ್ಚಿನ ಸಂಖ್ಯೆ ಎಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು,

ಮಾದಿಗ ಸಮುದಾಯ ತಾಲೂಕ ಹಿರಿಯ ಮುಖಂಡರಾದ, ರೇವಣಸಿಪ್ಪ ಕಟ್ಟಿಮನಿ ಹರೀಶ್ ರವಿ ಸಿಂಗೆ ಕೃಷ್ಣ ಕಟ್ಟೆಮನಿ ಸೂರ್ಯಕಾಂತ್ ಕಟ್ಟಿಮನಿ ರೇವಣಸಿದ್ದಪ್ಪ ಕೊಡ್ಲಿ ಭಗವಂತ್ ಸಿಂಗೆ ಮಾಣಿಕ್ ರಾವ್ ಶಿಂಧೆ ಶಶಿಕಾಂತ್ ಕಟ್ಟಿಮನಿ ಅರಣಕಲ್ ಮಹೇಶ ಭರತ್ನೂರ್ ಶರಣು ರಾಜಾಪುರ್ ಅಜಿತ್ ರಟ್ಕಲ್ ಕೃಷ್ಣ ಕಟ್ಟಿಮನಿ ಬೆಡಸೂರ್ ಮಹೇಶ್ ತಾಡ್ಪಳ್ಳಿ ಸಚಿನ್ ಕೊಡದೂರ.

ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ.

error: Content is protected !!