ವಿಧಿಯಾಟಕ್ಕೆ ಕಣ್ಣೀರು ಹಾಕುವ ರೈತರಿಗೆ ಈಗ ಕಳ್ಳರ ಕಾಟ ರೈತನ ಹೊಲದಲ್ಲಿನ ಸೋಲಾರ್ ಬ್ಯಾಟರಿ ಕದ್ದ ಕಳ್ಳರು

ಚಿಂಚೋಳಿ ತಾಲುಕಿನ ಚಿಮ್ಮನಚೋಡ್ ಗ್ರಾಮದ ರೈತನಾದ ರಿಯಾಜ್ ದುಂಬಾಳ್ಳಿ ಅವರ ಹೊಲದಲ್ಲಿ ಹಾಕಿರುವ ಕರೆಂಟ್ ಸೋಲಾರ್ ಬ್ಯಾಟರಿ ಕಳುವು ಮಾಡಿದ ಕಳ್ಳರು,, ಹಲವು ಬಾರಿ ರೈತರ ಸೋಲಾರ ಬ್ಯಾಟರಿ, ಇತರ ವಸ್ತುಗಳು, ಕಳ್ಳತನವಾಗಿತ್ತಿದ್ದು ರೈತರು ಮತ್ತು ಗ್ರಾಮಸ್ಥರು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಮನವಿ ಪತ್ರ ಸಲ್ಲಿಸಲಾಗಿದ್ದು ಕೂಡ ಏನು ಪ್ರಯೋಜನವಾಗಿಲ್ಲ ಎಂಬುದೇ ರೈತರ ಅಳಲು, ಸತತವಾಗಿ ಕಳ್ಳರು ಐದನೇ ಸಲ ಕಳ್ಳತನ ಮಾಡಿತ್ತಿದ್ದಾರೆ, ಕರೆಂಟ್ ಸೋಲಾರ್ ಬ್ಯಾಟರಿ ಮತ್ತು ನೀರಿನ ಒಳಗೆ ಹಾಕಿರುವ ಪಂಪ್ ಸೆಟ್ ಗಳು ನಿರಂತರ ಕಳುವಾಗುತ್ತಿವೆ ಇದರಿಂದ ರೈತರು ಬೆಳೆಗಳ ಸಮಸ್ಯೆ ಅಲ್ಲದೆ ಈ ಕಳ್ಳರ ಸಮಸ್ಯೆಯಿಂದ ದಾರಿ ತೋಚದಂತೆ ಕಳ್ಳರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಬಂಧಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂಬುವುದೇ ಆಶಯವಾಗಿ ಉಳಿದಿದೆ.ರಾಮರೆಡ್ಡಿ ಗ್ರಾಮದ ರೈತ ಪ್ರತಿಕ್ರಿಯಿಸಿ ಈಗಾಗಲೇ ಹಲವು ರೈತರ ಪಂಪ್ಸೆಟ್ಟುಗಳು ಸೋಲಾರ್ ಬ್ಯಾಟರಿಗಳು ಇತರೆ ಸಾಮಾನುಗಳು ಕಳ್ಳತನವಾಗುತ್ತಿದ್ದು ರೈತರು ಗ್ರಾಮಸ್ಥರು ಸೇರಿ ಪೊಲೀಸ್ ಅಧಿಕಾರಿಗಳಿಗೆ ಮನವಿಯನ್ನ ಮಾಡಿದ್ದೇವೆ ಆದರೆ ಕಳ್ಳರು ಮಾತ್ರ ಕಳ್ಳತನ ನಿರಂತರ ಮಾಡುತ್ತಿದ್ದು ರೈತರು ಕಂಗಲಾಗಿದ್ದಾರೆ ಪೋಲಿಸ್ ಅಧಿಕಾರಿಗಳು ಹೆಚ್ಚಿನ ಮುತ್ತುವರ್ಜಿ ವಹಿಸಿ ರಾತ್ರಿ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ರೈತರ ಸಾಮಾನುಗಳು ಕಳ್ಳತನ ವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!