ಸರಕಾರಿ ಪ್ರೌಢ ಶಾಲೆ ಭಂಡಾರಕುಮಟ ದಲ್ಲಿ “ಸಂವಿಧಾನ ದಿನಾಚರಣೆ “

ಸರಕಾರಿ ಪ್ರೌಢ ಶಾಲೆ ಭಂಡಾರಕುಮಟ ತಾ :ಔರಾದ ಶಾಲೆಯಲ್ಲಿ “ಸಂವಿಧಾನ ದಿನಾಚರಣೆ “ಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಮಕ್ಕಳಿಗೆ ಸಂವಿಧಾನದ ಪೂರ್ವಪೀಠಕೆ ಹೇಳಿಸುವುದರ ಮೂಲಕ ಪ್ರಾರಂಭೀಸಿ, ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ನಮೂಲ ವ್ಯಕ್ತಿಗಳಾದ ಜೈದೇವ ಮೇತ್ರೆ ಸಂವಿಧಾನ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಗ್ರಾಮದ ಹಿರಿಯರು ಗ್ರಾಮಪಂಚಾಯಿತಿಯ ಸದಸ್ಯರಾದ ತೆಜೇರಾವ್ ಮುಳೆ ಮಕ್ಕಳಿಗೆ ನೈತಿಕ ಮೌಲ್ಯ ಅಳವಡಿಸಲು ಮಾರ್ಗದರ್ಶನ ಮಾಡಿದರು. ಮುಶಿ ಚಂದ್ರಕಾಂತ ನಿರ್ಮಳೆ ಮಾತನಾಡಿದರು. ಶಿವಮೂರ್ತಿ ಜೀರ್ಗೆ ಸ್ವಾಗತ ಕೋರಿದರು. ಅತಿಥಿ ಶಿಕ್ಷಕರು ಮಕ್ಕಳು ಅಡುಗೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುರಳೀಧರ ಮೇತ್ರೆ ವಂದಿಸಿದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!