ಚಿಂಚೋಳಿ:-ಪರಿಸರ ರಕ್ಷಣೆಗೆ ಎಲ್ಲರು ಮುಂದಾಗಬೇಕು ಪರಿಸರದ ಉಳಿವಿನೊಂದಿಗೆ ನಮ್ಮ ಉಳಿವು ಇದೆ ಎಂಬುದನ್ನು ಎಲ್ಲರು ಅರಿಯಬೇಕೆಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ರವರು ಹೆಲೆನ್ಸ್ ಪದವಿ ಪೂರ್ವ ಕಾಲೇಜು ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಮುಂದುವರೆದು ನಮ್ಮ ಜೀವನದ ದಿನಚರಿಯಲ್ಲಿ ವಿಶೇಷ ದಿನಗಳಲ್ಲಿ ಸ್ಮರಣಿಯವಾಗಿ ಉಳಿಯುವ ಹಾಗೂ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿರುವ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಬೇಕು ಹಾಗೂ ಪರಿಸರ ಉಳಿಸಿ ಬೆಳೆಸಲು ತಮ್ಮ ಜೀವನವನ್ನು ಮುಡುಪಾಗಿಟ್ಟು ಇತಿಹಾಸ ಪುಟದಲ್ಲಿ ಅಜರಾಮರವಾಗಿರುವ ಸಾಲುಮರದ ತಿಮ್ಮಕ್ಕನ ಇತಿಹಾಸ ಅರಿಯಬೇಕೆಂದು ಸುದಿರ್ಘವಾಗಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆಯ ಡಿವಾಯ್ ಆರ್ ಎಫ್ ಒ ಮದರಸಾಭ್ ಪಾರೇಸ್ಠ್ ಬೀಟ್ ಶ್ರೀಮತಿ ರುಕ್ಸನಾ ಬೀಟ್ ಅರಣ್ಯ ಅಧಿಕಾರಿ ಮಲ್ಲಿನಾಥ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಧರ್ ಡಿಸೋಜಾ ಕುಮಾರಿ ಅರ್ಪಿತಾ ಸಿಸ್ಟರ್ ಮರಿಯಾ ಮೋಹನಕುಮಾರ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಶಮೀನಾಬೇಗಂ ನಿರೂಪಿಸಿದರೆ ರೇಣುಕಾ ಸ್ವಾಗತಿಸಿದರು ಶೃತಿ ವಂದಿಸಿದರು.
