ರಾಮದುರ್ಗ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ವಶಪಡಿಕೊಂಡ ಘಟನೆ ನಗರದ ಸಮೀಪದ ಹಲಗತ್ತಿ ಮುಖ್ಯ ರಸ್ತೆಯಲ್ಲಿ ಬುಧವಾರ ನಡೆದಿದೆ.
ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ರಾಮದುರ್ಗ ಪೊಲೀಸರು, ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಕೆರೂರ ಗ್ರಾಮದ ನವೀನ ಲಕ್ಷ್ಮಣ ಹೆದ್ದೇರಿ (21) ಎಂಬಾತರನ್ನು ಬಂಧಿಸಿದ್ದು, 180 ಗ್ರಾಂ ಗಾಂಜಾ, ಬೈಕ್, ಒಂದು ಸಾವಿರ ನಗದು ವಶಪಡಿಸಕೊಂಡು, ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪಿಐಎಸ್ ಸವಿತಾ ಮುನ್ಯಾಳ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಾಳಿಯಲ್ಲಿ ಗ್ರೇಡ್-2 ತಹಶೀಲ್ದಾರ ಸಂಜಯ ಖಾತೆದಾರ, ಗ್ರಾಮ ಆಡಳಿತ ಅಧಿಕಾರಿ ಮಹೇಶ್ ತೆಂಗಿನಕಾಯಿ, ಪೊಲೀಸ್ ಸಿಬ್ಬಂದಿಗಳಾದ ಹಣಮಂತ ವಾಸನ, ಕೃಷ್ಣಾ ಮಾದರ, ಸುರೇಶ ಕೋತಿನ, ಶ್ರೀಕಾಂತ ಜಾಧವ, ಶೇಷಪ್ಪ ಕಮಕೇರಿ ಸೇರಿದಂತೆ ಇತರರಿದ್ದರು.
ವರದಿ md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ
