ಹುಮನಾಬಾದ : ತಾಲೂಕಿನ ಹಳ್ಳಿಖೆಡ್ ಬಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣ ದಿಂದ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ರಾಜಶೇಖರ ಪಾಟೀಲ ರವರು ಬಿ.ಎಸ್.ಎಸ್.ಕೆ ಸಕ್ಕರೆ ಕಾರ್ಖಾನೆ ಕುರಿತು ಮಾತನಾಡಿ ಕಾರ್ಖಾನೆ ಪುನರ್ ಆರಂಭಿಸಲು ನಾವೆಲ್ಲರೂ ಶ್ರಮ ಪಡೋಣ ಚಳಿಗಾಲ ಅಧಿವೇಶನ ಮೋದಲು ಅಥವಾ ನಂತರ ಮುಖ್ಯಮಂತ್ರಿಗಳ ಸಚಿವರ ಗಮನಕ್ಕೆ ತಂದು ನಾನು ಮಾತನಾಡುತ್ತೇನೆ ಎಂದರು ಈ ಕುರಿತು ಹರ್ಷ ವ್ಯಕ್ತಪಡಿಸಿದ ಮಾಜಿ ಶಾಸಕ ಬಿ.ಎಸ್.ಎಸ್.ಕೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ್ ಕಲ್ಲೂರ್ ಮಾಜಿ ಸಚಿವರು ಈ ಹಿಂದೆ ಯು ಕೂಡ ಫ್ಯಾಕ್ಟರಿ ವಿಚಾರವಾಗಿ ಸಹಕಾರ ಮಾಡಿದರು ಈಗಲೂ ಮಾಡುತ್ತೇನೆ ಎಂದಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು, ಹಾಗೂ ಹಿಂದಿನ ಲೋಕಸಭೆ ಸದಸ್ಯ ಭಗವಂತ ಖುಬಾ ರವರು ಫ್ಯಾಕ್ಟರಿ ಪುನರ್ ಆರಂಭ ಮಾಡುತ್ತೇವೆ ಎಂಬ ಮಾತನಾಡಿದರು ಆದರೆ ಅವರು ಈಗ ಅಧಿಕಾರದಲಿಲ್ಲ ಹೀಗೆ ಮಾತನಾಡಿ ಹೋದವರು ಬಹಳ ಜನ ಇದ್ದಾರೆ ಈಗ ಏನಾಗುತ್ತೋ ಫ್ಯಾಕ್ಟರಿ ಮಾರಾಟ ಮಾಡಬೇಡಿ ಎಂದು ನಮ್ಮ ಮನವಿ ಯಾಗಿದೆ ಎಂದರು.