ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪರ ನಿಲ್ಲುವಂತೆ ಪ್ರಕಾಶ್ ರಾಜ್ ಕರೆ!

ಬೆಂಗಳೂರು: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ‘ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯ ತಂದೊಡ್ಡುವ’ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ಗೆ ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ದರು.

 

ಮುಸ್ಲಿಮರಿಂದ ಹಿಂಸಾಚಾರವನ್ನು ಪ್ರಚೋದಿಸುವ ಸಲುವಾಗಿ ಘಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಹಳೆಯ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಎಂದು ಮೊಹಮ್ಮದ್ ಜುಬೇರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಅದೇ ಎಫ್‌ಐಆರ್ ನಲ್ಲಿ ಇದೀಗ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ಅನ್ನು (ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯ ತಂದೊಡ್ಡುವ ಪ್ರಯತ್ನ) ಸೇರಿಸಲಾಗಿದೆ.

 

ಇದೀಗ ಪೊಲೀಸರ ಕ್ರಮವನ್ನು ವಿರೋಧಿಸಿ ಆಲ್ಟ್ ನ್ಯೂಸ್‌ನ ಮೂಲ ಕಂಪನಿಯಾದ ಪ್ರಾವ್ಡಾ ಮೀಡಿಯಾ ಫೌಂಡೇಶನ್‌ನ ನಿರ್ದೇಶಕಿಯಾಗಿರುವ ನಿರ್ಝರಿ ಸಿನ್ಹಾ ಅವರು ಟ್ವೀಟ್ ಮಾಡಿ @AltNews ನಿಮ್ಮ ಜೊತೆ ನಿಂತಿದೆ. @zoo_bear ಈ ಹೋರಾಟದಲ್ಲಿ ನಮ್ಮೊಂದಿಗೆ ನಿಲ್ಲುವಂತೆ ಮುಕ್ತ ವಾಕ್ ಸ್ವತಂತ್ರ, ಸ್ವತಂತ್ರ ಪತ್ರಿಕೋದ್ಯಮ ಮತ್ತು ಸತ್ಯ ಪರಿಶೀಲನೆಯ ಎಲ್ಲಾ ಬೆಂಬಲಿಗರನ್ನು ನಾವು ಒತ್ತಾಯಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

 

 

ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ನಟ ಕಮ್ ರಾಜಕಾರಣಿ ಪ್ರಕಾಶ್ ರಾಜ್ ಅವರು, #IStandWithZubair ಎಂದು ಬರೆದುಕೊಂಡಿದ್ದು ಈ ಹೋರಾಟದಲ್ಲಿ ಜುಬೇರ್ ನೊಂದಿಗೆ ನಿಲ್ಲುವಂತೆ ಮುಕ್ತ ವಾಕ್ ಸ್ವತಂತ್ರ, ಸ್ವತಂತ್ರ ಪತ್ರಿಕೋದ್ಯಮದ ಎಲ್ಲಾ ಬೆಂಬಲಿಗರಿಗೂ ಮನವಿ ಮಾಡಿದ್ದಾರೆ

error: Content is protected !!