ಡಾ ಬಿಆರ್ ಅಂಬೇಡ್ಕರ್ ವಸತಿ ಶಾಲೆ ಹಾಗೂ ನ್ಯಾಯಲಯ ಸಂಕಿರ್ಣ ಕಟ್ಟಡ ಕಳಪೆ ಕಾಮಗಾರಿ : ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ – ಶಿಂದೆ ಆಗ್ರಹ

ಔರಾದ್ : ಕಮಲನಗರ ತಾಲೂಕಿನ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ಹಾಗೂ ಔರಾದ್ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಸಂಕೀರ್ಣದ ಕಟ್ಟಡ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ದೂರಿದ್ದಾರೆ. ಈ ಕುರಿತು ಈಚೇಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ದೂರು ಸಲ್ಲಿಸಿದ ಅವರು, ಕಾಮಗಾರಿ ಗುಣಮಟ್ಟದ್ದಾಗುತ್ತಿಲ್ಲ. ಸಂಬಂಧಿಸಿದ ಗುತ್ತಿಗೆದಾರರಿಗೆ ಬಿಲ್ ಹಣ ಪಾವತಿ ಮಾಡಕೂಡದೆಂದು ಒತ್ತಾಯಿಸಿದ್ದಾರೆ.

 

ಕಾಮಗಾರಿಗೆ ಕಳಪೆ ಉಸುಕು, ಕಲ್ಲು ಹಾಗೂ ಕಡಿಮೆ ಪ್ರಮಾಣದ ಸಿಮೆಂಟ್ ಬಳಸಿ ಗುತ್ತಿಗೆದಾರರು ಸರಕಾರಕ್ಕೆ ದ್ರೋಹ ಎಸಗುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಅನೇಕ ದೂರುಗಳು ಬಂದಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಉನ್ನತ ಮಟ್ಟದ ಆಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಬೇಕು. ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಬಿಲ್ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

 

ಔರಾದ್ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಕಳಪೆ ಮಟ್ಟದ ನಡೆಯುತ್ತಿದೆ ಎಂದು ಗುತ್ತಿಗೆದಾರ ನಾರಾಯಣ ಸಿಂಗಾಡೆ ವಿರುದ್ಧ ವಕೀಲರ ಸಂಘ ಈಗಾಗಲೇ ತೀವ್ರವಾಗಿ ವಿರೋಧಿಸಿದೆ. ಅಲ್ಲದೆ ಕಮಲನಗರದಲ್ಲಿ ನಡೆಯುತ್ತಿರುವ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಕಟ್ಟದ ಬಗ್ಗೆ ಸಾರ್ವಜನಿಕರು ದೂರುಗಳು ನೀಡಿದ್ದಾರೆ. ಕುಡಲೇ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಭವಿ ತಾಂತ್ರಿಕ ತಜ್ಞರಿಂದ ತನಿಖೆ ನಡೆಸಬೇಕು. ಗುತ್ತಿಗೆದಾರ ನಾರಾಯಣ ಸಿಂಗಾಡೆ (ಸಿಂಗಾಡೆ ಕನ್ ಸ್ಟ್ರಕ್ಷನ್ ಕಂಪನಿ ಲಿ.) ಅನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಎರಡು ಕಾಮಗಾರಿಗಳ ಸಮಗ್ರ ತನಿಖೆ ನಡೆಸಿ ಸದರಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಸಚಿವರಿಗೆ ಸಲ್ಲಿಸಿದ‌ ಮನವಿಪತ್ರದಲ್ಲಿ ಡಾ. ಶಿಂಧೆ ಮನವಿ ಮಾಡಿದ್ದಾರೆ.

 

ವರದಿ : ರಾಚಯ್ಯ ಸ್ವಾಮಿ 

error: Content is protected !!