ಬೀಳಗಿ ಸುದ್ದಿ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಸಮಿತಿ ಬೀಳಗಿ, ವಕೀಲರ ಸಂಘ ಬೀಳಗಿ, ತಾಲೂಕ ಆಡಳಿತ, ತಾಲೂಕ್ ಪಂಚಾಯತ್, ಬೀಳಗಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆ ಬೀಳಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಬೀಳಗಿ ಹಾಗೂ ತಾಲೂಕ ವಿಕಲಚೇತನರ ಸೇವಾ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ತಾಲೂಕ ಪಂಚಾಯತ್ ಸಭಾಭವನದಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಯ ಕುಮಾರ್ ಮೊರಬ್ ಕಾರ್ಯನಿರ್ವಾಹ ತಾಲೂಕು ಪಂಚಾಯತ್ ಅಧಿಕಾರಿಗಳು, ಉದ್ಘಾಟಕ ರಾಗಿ ಪುಷ್ಪ ಜೋಗೊಜಿ ಮಾನ್ಯ ನ್ಯಾಯಾಧೀಶರು ಬೀಳಗಿ, ಮುಖ್ಯ ಅತಿಥಿಗಳಾಗಿ ಲತೀಫ್ ಬಾಗಲಕೋಟೆ ಶೇಖರ್ ಕಾಖಂಡಕಿ ಅಧ್ಯಕ್ಷರು ತಾಲೂಕ ವಿಕಲಚೇತನರ ಸೇವಾ ಅಭಿವೃದ್ಧಿ ಬೀಳಗಿ, ಉಮೇಶ ಎಂ ಚನ್ನಿ ಅಧ್ಯಕ್ಷರು ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ ಬೀಳಗಿ ಉಪನ್ಯಾಸಕರಾಗಿ ಬಸವರಾಜ್ ದಾವಣಗೆರೆ ಎಂ ಆರ್ ಡಬ್ಲ್ಯೂ ಕಾವ್ಯ ಛೆಬ್ಬಿ ಹಾಗೂ ಎಲ್ಲಾ ವಿ ಆರ್ ಡಬ್ಲ್ಯೂಗಳು ಲಕ್ಷ್ಮಿ ತಳವಾರ್ ವಂದನಾರ್ಪಣೆ ಮಾಡಿದರು.
ವರದಿ : ಖಾಜಾಮೈನುದ್ಧಿನ ತಹಶೀಲ್ದಾರ್