ಪಠ್ಯಪುಸ್ತಕ ವಿತರಣೆಯಲ್ಲಿ ಗೋಲ್ಮಾಲ್ ; ನೋಡಲ್‌ ಅಧಿಕಾರಿ ಅಮಾನತು ಶ್ರೀಶೈಲ ಸನದಿ

ಅಥಣಿ :  ಅಥಣಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡಲಾದ ಪಠ್ಯ ಪುಸ್ತಕಗಳನ್ನು ಖಾಸಗಿ ಶಾಲೆಗಳಿಗೆ ಮಾರಾಟ ಮಾಡಿ ಅವ್ಯವಹಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಹಾಗೂ ಪುಸ್ತಕ ವಿತರಣೆಯ ನೋಡಲ್ ಅಧಿಕಾರಿ ಶ್ರೀಶೈಲ ಸನದಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚಿಕ್ಕೋಡಿ ಡಿಡಿಪಿಐ ಸೀತಾ ರಾಮು ಆದೇಶಿಸಿದ್ದಾರೆ. ಈ ಆರೋಪದ ಜಾಲ ಹಿಡಿದು ಜೆಕೆ ನ್ಯೂಸ್ ಕನ್ನಡ ನಿರಂತರ ಸುದ್ದಿ ಬಿತ್ತರಿಸಿದ್ದು ಇದರ ಪಲವಾಗಿ 06-12-2024ರಂದು ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಈ ವರದಿ ಆಧರಿಸಿ ಚಿಕ್ಕೋಡಿ ಡಿಡಿಪಿಐ ಸೀತಾರಾಮು ಅವರು ಡಯಟ್ ಅಧಿಕಾರಿಗಳು ಒಳಗೊಂಡ ಐವರು ಅಧಿಕಾರಿಗಳನ್ನೊಳಗೊಂಡ 25 ಸದಸ್ಯರ ತಂಡ ರಚಿಸಿ ವಿಚಾರಣೆ ನಡೆಸಿತ್ತು. ಐದು ದಿನಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಆಥಣಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ತಲುಪಿಸಬೇಕಾದ ಪಠ್ಯ ಪುಸ್ತಕ

ವಿತರಣೆಯಲ್ಲಿ ಗೋಲ್‌ಮಾಲ್‌? ಖಾತಗಳಿಗೆ ಪುಸ್ತಕ ಮಾರಾಟ ನಕಲಿ ಬಿಲ್ ಸೃಷ್ಟಿಸಿ ವೆಚ್ಚ ಕಬಳಿಕೆ ಹಣದ ಆಸೆಗಾಗಿ ಖಾಸಗಿ ಶಾಲೆಗಳಿಗೆ ಮಾರಾಟ ಮಾಡಿರುವುದನ್ನು ಪತ್ತೆ ಮಾಡಿತ್ತು.

 

ಬಿಇಒ ವಿರುದ್ಧ ಕ್ರಮಕ್ಕೆಶಿಫಾರಸು

 

ಅವ್ಯವಹಾರದ ಕುರಿತು ತನಿಖಾ ತಂಡ ಡಿಡಿಪಿಐಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಡಿಡಿಪಿಐ ಅವರು ಶನಿವಾರ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಮತ್ತು ಪಠ್ಯ ಪುಸ್ತಕ ವಿತರಣೆ ನೋಡಲ್ ಅಧಿಕಾರಿ ಶ್ರೀಶೈಲ ಸನದಿ ಅವರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ.ಬಿ.ಮೋರಟಗಿ ಸಹ ಈ ಅವ್ಯವಹಾರಕ್ಕೆ ಸಹಕಾರ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಮೇಲೂ ಶಿಸ್ತುಕ್ರಮ ಕೈಗೊಳ್ಳುವಂತೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

 

ವರದಿ : ಭರತೇಶ್ ನಿಡೋಣಿ 

error: Content is protected !!