ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಭಾರತೀಯ ಸೇನಾ ವಾಹನ ಉರುಳಿ ಹುತಾತ್ಮರಾದ ಯೋಧರಿಗೆ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಸಂತಾಪ. ಜಮ್ಮು ಕಾಶ್ಮೀರದ ಮೆಂಧಾರ್ನ್ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ (ಡಿಸೆಂಬರ್ 24) ಸಂಜೆ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನ ಕಂದಕಕ್ಕೆ ಬಿದಿದ್ದೆ. ಪರಿಣಾಮ ವಾಹನದಲ್ಲಿದ್ದ 5 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆ ಗಡಿ ನಿಯಂತ್ರಣ ರೇಖೆಯ ಬಳಿ ಸೇನಾ ವಾಹನವೊಂದು 160 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 5 ಮಂದಿ ಯೋಧರು ಹುತಾತ್ಮರಾಗಿದ್ದಾರೆ, ವಾಹನ ಚಾಲಕ ಸೇರಿ 5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಬೆಳಗಾವಿಯ ಯೋಧ ಧರ್ಮರಾಜ ಸುಭಾಷ್ ಖೋತ ಸೇರಿದಂತೆ ಕರ್ನಾಟಕದ ಮೂವರು ಹುತಾತ್ಮರಾಗಿದ್ದಾರೆ ಎನ್ನಲಾಗುತ್ತಿದೆ.
ಈ ಪಾಂತ್ರದಲ್ಲಿ ರಕ್ಷಣಾಕಾರ್ಯಗಳು ನಡೆಯುತ್ತಿದ್ದು, ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದಿಂದ ಹುತಾತ್ಮರಾದ ಯೋಧರಿಗೆ ಸಂತಾಪ ಹಾಗೂ ವ್ಯದ್ಯಕೀಯ ಆರೈಕೆ ಪಡೆಯುತ್ತಿರುವ ಯೋಧರು ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.
ಸಂಘದ ಪರವಾಗಿ ಶಿವ ಪ್ರಸಾದ್ ಜಿ ರಾಜ್ಯಾಧ್ಯಕ್ಷರು