ವಿಜಯಪುರ ನಗರ ಶಾಸಕರಾದ ಬಸವನಗೌಡ ಪಾಟೀಲ ಯತ್ನಳ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಹಾನಗರ ಪಾಲಿಕೆಯ ಸದಸ್ಯರಾದ ಶಿವುರುದ್ರ ಬಾಗಲಕೂಟ ರವರ ವಾರ್ಡ್ ನಂಬರ್ 32 ಜೋರಾಪುರ್ ಪೇಟ್ ಶಾಪೇಟಿ ಓಣಿಯಲ್ಲಿ ಬರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 9 ರ ಕೊಠಡಿಗಳ ನಿರ್ಮಾಣಕ್ಕೆ 20 ಲಕ್ಷ ರೂಪಾಯಿಗಳು ಮಂಜೂರಾಗಿದ್ದು, ಸ್ಥಳ ಪರಿಶೀಲಿಸಲಾಯಿತು ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಅಪ್ಪಾಸಾಹೇಬ್ ದಳವಾಯಿ, ಪ್ರಾಜೆಕ್ಟ್ ಡೈರೆಕ್ಟರ್ ಆಕಾಶ್ ತಿಮಶೆಟ್ಟಿ, ಹಿರಿಯರಾದ ಶರಣಪ್ಪ ಶಾಪೇಟಿ, ಶ್ರೀನಿವಾಸ್ ಶಹಪುರ್, ಗುರುರಾಜ್ ಶಾಪೇಟಿ, ಗುರುಮಾತೆಯರು ಉಪಸ್ಥಿತರಿದ್ದರು,ಸ್ಪಂದಿಸಿ ಹಣ ಬಿಡುಗಡೆಗೊಳಿಸಿದ ನಗರ ಶಾಸಕರಾದ ಶ್ರೀ ಬಸವನಗೌಡ ಪಾಟೀಲ್ ಯತ್ನಾಳ್ ರವರಿಗೆ ಧನ್ಯವಾದಗಳು.
