ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಕ್ಕೆ ಜಿಲ್ಲಾ ಪದಾಧಿಕಾರಿಗಳು ಸದಸ್ಯರು ರಾಜೀನಾಮೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಪದಾಧಿಕಾರಿಗಳು ಸದಸ್ಯರು ಸ್ವಯಂ ಪ್ರೇರಿತವಾಗಿ ಸಂಘಟನೆಗೆ ರಾಜೀನಾಮೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಬೀದರ್ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳು ಸದಸ್ಯರು ಸಂಘಟನೆಗೆ ರಾಜೀನಾಮೆ ನೀಡಿ ರಾಜ್ಯಧ್ಯಕ್ಷರಿಗೆ ಪೋಸ್ಟ್ ಮಾಡಿದ್ದಾರೆ ಸಂಘದ ರಾಜ್ಯಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ರವರು ಸ್ವಯಂ ಪ್ರೇರಿತ ನಿರ್ಣಯ ಕೈಗೊಂಡಿದ್ದು ನಮ್ಮ ಜೊತೆಗೆ ಯಾವುದೇ ರೀತಿಯ ಚರ್ಚೆ ಮಾಡದೆ ನಮ್ಮ ಗಮನಕ್ಕೆ ತರದೇ ಬೀದರ್ ಜಿಲ್ಲಾ ಪದಾಧಿಕಾರಿಗಳ ಸದಸ್ಯರ ಜೊತೆಗೆ ಚರ್ಚೆ ಮಾಡದೆ ಏಕಾಏಕಿಯಾಗಿ ಜಿಲ್ಲಾಧ್ಯಕ್ಷರ ಬದಲಾವಣೆಯನ್ನ ಮಾಡಿರುತ್ತಾರೆ ರಾಜ್ಯಧ್ಯಕ್ಷರು ವೈಯುಕ್ತಿಕ ನಿರ್ಧಾರ ತೆಗೆದು ಕೊಂಡು ಜಿಲ್ಲಾಧ್ಯಕ್ಷರಾದ ಸೈಯದ ಮೋಸಿನ್ ಅಲಿ ಅವರನ್ನು ಸಂಘಟನೆಯಿಂದ ಬಿಡುವು ಗೊಳ್ಳಿಸಿರುತ್ತಾರೆ, ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ನಮ್ಮ ಗಮನಕ್ಕೆ ಬಂದಿರುತ್ತದೆ ಹೀಗಾದರೆ ಮುಂದಿನ ದಿನಗಳಲ್ಲಿ ನಾವು ಶ್ರಮ ಪಟ್ಟು ಸಂಘ ಕಟ್ಟಿದ ಮೇಲೆ ಅವರವರ ವೈಯುಕ್ತಿಕ ನಿರ್ಧಾರದ ಪ್ರಭಲ ಬಲ ನಮ್ಮ ಮೇಲು ಬೀಳುವುದು ಎಂದು ನಮಗೆ ತಿಯುತ್ತದೆ ಮತ್ತು ಇದರಿಂದ ನಮಗೆ ಬಹಳ ನೋವುಂಟಾಗಿದೆ, ಆದುದ್ದರಿಂದ ಈ ಸಂಘಟನೆಗೆ ನಾವುಗಳು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ,

ರಾಜೀನಾಮೆಗೆ ಮುಂದಾದ ಸದಸ್ಯರು ಈ ಕೆಳಗಿನಂತೆ ಇದ್ದಾರೆ : – 

ಯಾಕೂಬ್ ಬಾ ಉಪಾಧ್ಯಕ್ಷರು ಬೀದರ,

ಪ್ರದೀಪ್ ದಾದಾನೂರ್ ತಾಲೂಕ ಅಧ್ಯಕ್ಷ ಬೀದರ್,

ಮಿರ್ಜಾ ಬೇಗ್ ಕಾರ್ಯಾಧ್ಯಕ್ಷ ಬೀದರ್,

ಕುಸ್ರು ಅಹಮದ್ ಸಲಹೆಗಾರರು ಬೀದರ್,

ಸಮೀರ್ ಖಾನ್ ಕಾರ್ಯದರ್ಶಿ ಬೀದರ್,

ವಿಕಾಸ್ ಕುಮಾರ್ ಸಹ ಕಾರ್ಯದರ್ಶಿ,

ರೋಹನ್ ವಾಗ್ಮರೆ ಸದಸ್ಯರು,

ಅಬ್ದುಲ್ ಖಾದೀರ್ ವಕೀಲರು ಕಾನೂನು ಸಲಹೆಗಾರರು,

ಸೇರಿ ಸಂಘಟನಾ ಬಿಡಲು ನಿರ್ಧರಿಸಿ ರಾಜೀನಾಮೆ ಪತ್ರ ಪೋಸ್ಟ್ ಮುಖಾಂತರ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರಿಗೆ ಕಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

error: Content is protected !!