ಔರಾದ್ : ತೆಲಂಗಾಣ ಮತ್ತು ಕರ್ನಾಟಕದಿಂದ ಪಂಢರಪುರಕ್ಕೆ ಹೊರಡುವ ಪಾದಯಾತ್ರಿಗಳಿಗೆ ಔರಾದ್ ಪಟ್ಟಣದ ಗಿರಣೆ ಬಡಾವಣೆಯಲ್ಲಿ ಸೋಮವಾರ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀನಿವಾಸ ಖೂಬಾ ಅವರು ಅನ್ನ ದಾಸೋಹ ಸೇವೆ ಮಾಡಿದ್ದಾರೆ.
ತೆಲಂಗಾಣದ ಕಂಗಟಿ ಮಾರ್ಗವಾಗಿ ತಾಲೂಕಿನ ಚಿಂತಾಕಿ, ಸುಂಧಾಳ, ತೇಗಂಪೂರ, ಮಮದಾಪೂರ ಮಾರ್ಗವಾಗಿ ಆಗಮಿಸಿದ ಸೂಮಾರು 600-700 ಪಾದಯಾತ್ರಿಗಳಿಗೆ ಅನ್ನ, ಸಾಂಬಾರ, ಪಲ್ಲೆ ಭಕ್ತರಿಗೆ ಉಣ ಬಡಿಸುತ್ತಿದ್ದಾರೆ. ಈ ವೇಳೆ ಮಾದಪ್ಪ ಖೂಬಾ ಪಾದಯಾತ್ರಿಗಳ ಆರೋಗ್ಯ ವಿಚಾರಿಸಿದರು. ಕಳೆದ 40 ವರ್ಷದಿಂದ ಕಾಮರೆಡ್ಡಿ ಜಿಲ್ಲೆಯ ನಾನಾ ಮಲ್ಲೂರ,ಜಾಜಲಪಾಡ್, ವಡಲಂ ಸೇರಿದಂತೆ ನಾನಾ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿವೆ ಎಂದು ಪಾದಯಾತ್ರಿ ರಾಜು ಪಾಟೀಲ್ ತಿಳಿಸಿದ್ದಾರೆ.
ಜ.24ರಂದು ಪಾದಯಾತ್ರೆ ಆರಂಭವಾಗಿದ್ದು, ಫೆಬ್ರವರಿ 6 ರಂದು ಪಂಢರಪುರಕ್ಕೆ ತಲುಪಲಿದೆ ಎಂದು ಹಾವಯ್ಯ ಸ್ವಾಮಿ, ರಾಮಲು ವಡಲಂ, ಪಂಡರಿ, ಪ್ರಶಾಂತ್, ಕಾರೆಗಾಮ ತಿಳಿಸಿದ್ದಾರೆ.
ಪ್ರತಿ ವರ್ಷ ನಾವುಗಳು ಪಾದಯಾತ್ರೆ ಮೂಲಕ ಆಗಮಿಸಿದಾಗ ಇಲ್ಲಿಯ ಖೂಬಾ ಪರಿವಾರದವರು ಭಕ್ತಿಯಿಂದ ಅನ್ನದಾಸೋಹ ಮಾಡುತ್ತಾರೆ ಎಂದು ಮಹಿಳೆಯರು ಹರ್ಷ ವ್ಯಕ್ತಪಡಿಸಿದರು.
ಅನೇಕ ವರ್ಷಗಳಿಂದ ಆಷಾಢ ಶುದ್ಧ ಏಕಾದಶಿಗೆ ವಿಠ್ಠಲನ ದರ್ಶನ ಪಡೆಯಲು ಪಂಢರಪುರಕ್ಕೆ ಪಾದಯಾತ್ರೆ ಮಾಡುತ್ತಾರೆ. ಅವರ ಸೇವೆಯನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ ಎಂದು ಹಿರಿಯ ಜೀವಿ ಮಾದಪ್ಪ ಖೂಬಾ, ಗುತ್ತಿಗೆದಾರ ಶ್ರೀನಿವಾಸ ಖೂಬಾ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ