ಸರಕಾರ ರೈತ ಸಮಸ್ಯೆಗೆ ಸ್ಪಂದಿಸಿ, ಬೆಂಬಲ ಬೆಲೆ ನಿಗದಿ ಮಾಡಿ 

ಯಾದಗಿರಿ : ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಸಾಲಸೂಲ ಮಾಡಿ ಒಣಮೆಣಸಿನಕಾಯಿ ಬೆಳೆದಿದ್ದು, ಸರಿಯಾದ ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ. ನೀರಿನ ಕೊರತೆ ರೋಗಬಾಧೆಯಿಂದ ಇಳುವರಿಯು ಈ ವರ್ಷ ಅತಿಕಡಿಮೆ ಬಂದಿದ್ದು, ಸದ್ಯಕ್ಕೆ ಮೆಣಸಿನಕಾಯಿ ಬೆಲೆ ಪಾತಳಕ್ಕೆ ಕುಸಿದಿದೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಬೆಂಬಲ ಬೆಲೆ ಘೋಷಿಸಿ ರೈತರ ಹಿತಕಾಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಾಹಪುರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

ಮನವಿ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಚ್. ಆರ್ ಬಡಿಗೇರ್ ಈ ಬಾರಿ ರೈತರು ಹೆಚ್ಚಾಗಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದು, ದಾಖಲೆ ಮಟ್ಟದ ಬೆಲೆ ಕುಸಿತ ಕಂಡಿದೆ. ಹಲವಾರು ರೈತರು ಮೆಣಸಿನಕಾಯಿಗಳನ್ನು ಜಮೀನಿನಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದ್ಯಂತ ಈ ಬಾರಿ ಹೆಚ್ಚು ಮೆಣಸಿನಕಾಯಿ ಬೆಳೆದಿದ್ದು ಆ ಕಾರಣ ದರ ಕುಸಿತ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಕ್ವಿಂಟಲ್‌ಗೆ ಅಂದಾಜು 8 ರಿಂದ 12 ಸಾವಿರವರೆಗೆ ಇದೆ. ಕಳೆದ ಎರಡು ವರ್ಷದಿಂದ ಸುಮಾರು 20 ರಿಂದ 25 ಸಾವಿರ ವರೆಗೆ ಮೆಣಸಿನಕಾಯಿಗೆ ಬೆಲೆ ಇತ್ತು.

 

ಈ ಬಾರಿ ಬೆಲೆ ಮತ್ತು ಇಳುವರಿಯು ಬಾರದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆಡೆ ಬರಗಾಲ ಮತ್ತೊಂದ್ದು ಕಡೆ ಬೆಳೆಗಳ ಬೆಲೆ ಕುಸಿತ. ಸರಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿ ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ 23,000 ರಿಂದ 25ಸಾವಿರಕ್ಕೆ ನಿಗದಿ ಮಾಡಿ ಖರೀದಿ ಮಾಡಬೇಕು. ಕೂಡಲೇ ಬೆಂಬಲ ಬೆಲೆ ಘೋಷಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್.ಆರ್.ಬಡಿಗೇರ ಜಿಲ್ಲಾಧ್ಯಕ್ಷರು, ಭೀಮಣ್ಣ ಮಾಲಿ ಬಿರೆದಾರ, ಮಾರ್ದಾನಿ ಸಲಾದಪೂರ, ನಾಗಣ್ಣ ಗಂಗನಾಳ, ಯಮನಪಗೌಡ ಕುಂಬಾರ ಗೌರವಾಧ್ಯಕ್ಷರು, ಮಲ್ಲಣ್ಣ ಸಾಂತಪೂರ, ಸುಭಾಸ ಹೋತಪೇಠ, ಮಾಳಪ್ಪ ಬೋಸ್ಟಿ, ಭೀಮಣ್ಣಗೌಡ ಪೋಲಿಸ್ ಪಾಟೀಲ್, ಆನಂದ ಟಣಕೆದಾರ, ಬಸವರಾಜ ನಾಟೇಕಾರ್, ಡಿಎಸ್‌ಎಸ್ ಸಂಚಾಲಕರು, ಜಿಂದಾವಾಲಿ ಡಿಎಸ್‌ಎಸ್ ಸಂಘಟನಾ ಸಂಚಾಲಕರು, ಸೋಮಲಿಂಗ ಹುಗ್ಗಿ ಸೇರಿದಂತೆ ರೈತರು ಇದ್ದರು.

 

ಹೈಲೆಟ್ಸ್ :

ಮೆಣಸಿನಕಾಯಿ ಬೆಲೆ ಪಾತಳಕ್ಕೆ ಕುಸಿತ.

ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತರು.

ರೈತರು ಆತ್ಮಹತ್ಯೆ ಮಾಡಿಕೊಳ್ಳವ ಪರಿಸ್ಥಿತಿ ನಿರ್ಮಾಣ.

ಮೆಣಸಿನಕಾಯಿ ಬೆಲೆ 25ಸಾವಿರ ನಿಗದಿ ಮಾಡಿ :ರೈತರ ಆಗ್ರಹ.

“ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಮಾಡದೆ ಇದ್ದಲ್ಲಿ ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಸ್ಥಿತಿ ಇದ್ದು. ಇದಕ್ಕೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವೇ ನೇರ ಹೊಣೆಗಾರರು. ಈ ಬಗ್ಗೆ ಬಂದ್‌ಗೆ ಕರೆ ಕೊಟ್ಟು ರಸ್ತೆಗಿಳಿದು ಉಗ್ರ ಹೋರಾಟ ಮತ್ತು ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

_ಎಚ್. ಆರ್. ಬಡಿಗೇರ್ (ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರು ಯಾದಗಿರಿ )

error: Content is protected !!