ಚಿಂಚೋಳಿ ತಾಲೂಕಿನ ಚಿಮ್ಮನ ಚೋಡ ಗ್ರಾಮದಲ್ಲಿ ಬೀದರ್ ಸಂಸದ ಸಾಗರ ಖಂಡ್ರೆ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿದರ್ ಸಂಸದ ಸಾಗರ್ ಖಂಡ್ರೆ ವರ್ಷಕ್ಕೆ 5 ಕೋಟಿ ಅನುದಾನವಿದ್ದು ತಾಲೂಕಿಗೆ 60 ಲಕ್ಷಗಳ ರೂಪಾಯಿ ತಮಗೆ ಯಾವ ಕೆಲಸ ಅವಶ್ಯಕತೆ ಆಗುತ್ತೆ ಅಂತಹ ಕೆಲಸಗಳನ್ನು ಮಾಡಿಕೊಳ್ಳಿ, ಪಕ್ಷದ ಸಂಘಟನೆ ಪಕ್ಷದ ಏಳಿಗೆಗೆ ಪಕ್ಷದ ಕಾರ್ಯಕರ್ತರು ಹಾಗೂ ನಾವೆಲ್ಲ ಸೇರಿ ಒಗ್ಗಟ್ಟಾಗಿ ಪಕ್ಷವನ್ನು ಬೆಳೆಸೋಣ ನಮ್ಮದು ಒಂದೇ ಪರಿವಾರ ಎಂದು ಹೇಳಿದರು. ಸುಭಾಷ್ ರಾಠೋಡ್ ಮಾತನಾಡಿ ನಮ್ಮ ಸಂಸದರು ಜ್ಞಾನವುಳ್ಳ ವ್ಯಕ್ತಿಯಾಗಿದ್ದು ಕಾರ್ಯಕರ್ತರ ಸಮಸ್ಯೆಗಳನ್ನು ಅರಿತುಕೊಂಡವರಾಗಿದ್ದು ಅವರ ಕೈಮೀರಿ ಕೂಡ ಸಹಾಯವನ್ನು ಮಾಡುತ್ತಾರೆ ಭಾರತದಲ್ಲಿ ವೈಚಾರಿಕ ಸಂಘರ್ಷ ನಿರ್ಮಾಣ ಆಗಿದ್ದು ರಾಜಕೀಯ ಸಂಪೂರ್ಣ ಮಾಧ್ಯಮ ವಶದಲ್ಲಿ ಆಗಿದ್ದು ಪ್ರಮುಖ ಚರ್ಚೆಗಳ ವಿಷಯ ಬಾರದೆ ಅವರಿಗೆ ಬೇಕಾದಂತ ವಿಷಯಗಳ ಚರ್ಚೆ ಮಾಡುತ್ತಿದ್ದಾರೆ ರಾಜಕೀಯದಲ್ಲಿ ಕಳವಳದ ವಿಷಯ. ಭಾರತದ 1% ಪ್ರತಿಶತ ಶ್ರೀಮಂತರು ದೇಶದ 52% ಪ್ರತಿಶತ ಸಂಪತ್ತನ್ನು ಹೊಂದಿದ್ದು ಇದಕ್ಕೆ ಆರ್ಥಿಕ ನೀತಿಯೇ ಕಾರಣ ನಾವೆಲ್ಲ ಭೌತಿಕ ಸೈದ್ಧಾಂತಿಕವಾಗಿ ಮಾನಸಿಕವಾಗಿ ಬಲಿಷ್ಠರಾಗಬೇಕು ಎಂದು ಹೇಳಿದರು. ಲಕ್ಷ್ಮಣ್ ಆವಂಟಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಜನಸಾಮಾನ್ಯರಿಗೆ ಮುಟ್ಟುತಿದ್ದು ಕೆಕೆಆರ್ಡಿಬಿ ವತಿಯಿಂದ ತಾಲೂಕಿಗೆ ಸುಮಾರು 200 ಕೋಟಿಗಳು ಬಂದಿದ್ದು ಚಿಂಚೋಳಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಇದಕ್ಕೆ ಕಾರಣ ಶಾಸಕರು ಎಂದು ಹೇಳಿದರು. ಪುರಸಭೆ ಅಧ್ಯಕ್ಷ ಆನಂದ್ ಟೈಗರ್ ಮಾತನಾಡಿ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ನಮ್ಮ ತಾಲೂಕಿನ ಜಲ್ವಂತ ಸಮಸ್ಯೆಗಳನ್ನು ಪಾರ್ಲಿಮೆಂಟ್ ನಲ್ಲಿ ಪ್ರಶ್ನೆ ಕೇಳುವ ಮುಖಾಂತರ ಅಂತ ಸಮಸ್ಯೆ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆಂಬ ಆಸೆಯ ಜನರಲ್ಲಿ ಇದೆ ತಾಲೂಕಿಗೆ ಅಭಿವೃದ್ಧಿ ಮಾಡಲು ಅವರ ಸಹಕಾರ ನೀಡುತ್ತಾರೆ ಎಂಬ ಆಸೆಯು ಕೂಡ ಇದೆ ಎಂದು ಹೇಳಿದರು. ನಾಗೇಶ್ ರಾವ್ ಮಾಲಿ ಪಾಟೀಲ್, ಶರಣು ಪಾಟೀಲ್ ಮೋತಕಪಳ್ಳಿ , ಅಬ್ದುಲ್ ಬಾಸಿದ್, ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಬಸವರಾಜ್ ಮಲಿ,ಸಂತೋಷ್ ಗುತ್ತೇದಾರ್, ಅಜಿತ್ ಪಾಟೀಲ, ದೇವೇಂದ್ರಪ್ಪ ಕಾಳಗಿ, ಮಲ್ಲಿಕಾರ್ಜುನ್ ರೆಡ್ಡಿ,ಲಚಪ್ಪ ಜಮಾದಾರ್, ಅಜಿತ್ ಪಾಟೀಲ, ಪ್ರದೀಪ, ಚಿರಂಜೀವಿ, ನರಸಿಂಹಲು ಕುಂಬಾರ, ಜಗನ್ನಾಥ ಗುತ್ತೇದಾರ, ಸಯ್ಯದ್ ಶಬ್ಬೀರ, ಜನಾರ್ಧನ್ ಪಾಟೀಲ, ನವೀನ್ ಇನ್ನು ಹಲವಾರು ಜನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್