ಭಾರತದ ಪ್ರಜಾಪ್ರಭುತ್ವದಲ್ಲಿ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರವರು ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಆಶಯವನ್ನುಬರೆದಿದ್ದಾರೆ. ಅನುಷ್ಠಾನಕ್ಕಾಗಿಸಂವಿಧಾನದ 15. 16 ರ ಅನುಚ್ಛೇದದಲ್ಲಿ ಶೋಷಿತ ಸಮುದಾಯಗಳು ಸಮಾನವಾಗಿ ಬದುಕಲು ಮೀಸಲಾತಿ ಕಲ್ಪಿಸುವ ಮೂಲಭೂತ ಹಕ್ಕನ್ನು ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಚರ್ಮಗಾರಿಕೆಗೆ ಸಂಬಂಧಿಸಿದ ಮಾದಿಗ. ಸಮಗಾರ. ಡೋಹರ, ದಕ್ಕಆಗ, ಮಚ್ಚಗಾರ ಮತ್ತು ಇತರೆ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗದಿರುವ ಕಾರಣ ಇವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಈ ಅಸಮಾನತೆಯ ಸಂತ್ರಸ್ಥರಾದ ಮಾದಿಗರು, ದಲಿತರು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ 30 ವರ್ಷಗಳ ತ್ಯಾಗ ಬಲಿದಾನದಿಂದ ಸಾವುನೋವುಗಳನ್ನು ಅನುಭವಿಸಿ ನಿರಂತರವಾಗಿ ಹೋರಾಟ ಮಾಡಿದ ಪರಿಣಾಮದಿಂದಲೇ ಸರ್ವೋಚ್ಛ ನ್ಯಾಯಾಲಯವು ದಿನಾಂಕ: 01.08.2024 ರಂದು 7 ಜನರ ನ್ಯಾಯಾದೀಶರ ಸಂವಿಧಾನ ಪೀಠವು ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವುದು ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೇ (Emperical Data) ದತ್ತಾಂಶವನ್ನು ಪಡೆದು ಒಳಮೀಸಲಾತಿ ವರ್ಗಿಕರಣವನ್ನು ಜಾರಿ ಮಾಡಬಹುದೆಂದು ಆದೇಶಿಸಿದೆ. ಸುಪ್ರೀಂಕೋರ್ಟಿನ ಆದೇಶವನ್ನು ಮರುಪರಿಶೀಲಿಸಲು ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನೂ ವಜಾಮಾಡಿದೆ.
ಒಳಮೀಸಲಾತಿ ವರ್ಗೀಕರಣದ ಚಳುವಳಿಯನ್ನು ಅಂತಿಮಘಟ್ಟಕ್ಕೆ ತಲುಪಿಸಬೇಕಾಗಿರುವುದು ನಮ್ಮ ತಲೆಮಾರಿನ ಕರ್ತವ್ಯವಾಗಿದೆ. ಮಾದಿಗರ ಓಟ್ ಬ್ಯಾಂಕ್ನಿಂದ ಅಧಿಕಾರಕ್ಕೆ ಬಂದು. ಮಾದಿಗರನ್ನೇ ನಿರ್ಲಕ್ಷಿಸುತ್ತಿರುವ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಗಳಲ್ಲಿ ಒಳಮೀಸಲಾತಿ ಜಾರಿಮಾಡುತ್ತೇವೆಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದ ಮೇಲೆ ವಿಳಂಬ ನೀತಿ ಅನುಸರಿಸುತ್ತಿರುವುದು ಎಷ್ಟುಸರಿ? ನ್ಯಾಯದ ಅಸ್ಮಿತೆಯಾದ
ನ್ಯಾಯಮೂರ್ತಿ, ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸದೆ ಅಥವಾ ತಿರಸ್ಕರಿಸದೆ ಅತಂತ್ರ ಸ್ಥಿತಿಯಲ್ಲಿ ಒಳಮೀಸಲಾತಿ ವರ್ಗಿಕರಣವನ್ನು ಉದ್ದೇಶಪೂರ್ವಕವಾಗಿ ವಿಳಂಭಮಾಡುತ್ತಿರುವುದನ್ನು ಒಕ್ಕೂಟವು ಖಂಡಿಸುತ್ತೇವೆ. ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾದ ಶೋಷಿತ ಸಮುದಾಯಗಳ ಸ್ಥಿತಿಗತಿಗೆ ಸಂಬಂಧಪಟ್ಟ ಮಾಹಿತಿಯ ದತ್ತಾಂಶಗಳನ್ನು ಮುಚ್ಚಿಡುವುದು ಈ ಸಮಾಜಕ್ಕೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ.
ಸರ್ಕಾರವೇ 14 ಕೋಟಿ ಖರ್ಚು ಮಾಡಿ ದೇಶದಲ್ಲೇ ಮೊದಲ ಬಾರಿಗೆ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿಯ ಸೌಲಭ್ಯಗಳ ಹಂಚಿಕೆಯಲ್ಲಾದ ತಾರತಮ್ಯವನ್ನು ವೈಜ್ಞಾನಿಕವಾಗಿ ಮನೆ ಮನೆ ಸಮೀಕ್ಷೆಯ ಮೂಲಕ ಪರಿಶೀಲಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ನ್ಯಾಯಮೂರ್ತಿ ಸದಾಶಿವರವರ ಆಯೋಗವು 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಸಾರ್ವಜನಿಕ ಸೇವೆಗಳಲ್ಲಿ ಎಂ.ಪಿ. ಎಂ.ಎಲ್.ಎ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರ ಜಾತಿವಾರು ಜನಸಂಖ್ಯೆಯ ರಾಜಕೀಯ ಪ್ರಾತಿನಿಧ್ಯದಲ್ಲಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ, ಪ್ರವೇಶಾತಿಗಳಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ದಾಖಲಿಸಿದ್ದಾರೆ ಜೊತೆಗೆ ಪರಿಶಿಷ್ಟ ಜಾತಿಗಳಲ್ಲಿ ಎಷ್ಟು ಜನ ಗುಡಿಸಲು ವಾಸಿಗಳಿದ್ದಾರೆ, ಉನ್ನತ ಶಿಕ್ಷಣ ಪಡೆದಿದ್ದಾರೆ. ಶಿಕ್ಷಣವೇ ಪಡೆದುಕೊಳ್ಳಲಾಗದೆ ವಂಚಿತರಾಗಿದ್ದಾರೆ. ಭೂಮಿಯೇ ಇಲ್ಲದೆ ಕೂಲಿ ಕಾರ್ಮಿಕರಾಗಿದ್ದಾರೆ. ಅಕ್ರಮಗಳಿಗೆ ತುತ್ತಾಗಿ ಭೂಮಿ ಕಳೆದುಕೊಂಡಿದ್ದಾರೆ. ಎಷ್ಟು ಜನ ನಿವೇಶನಗಳೇ ಇಲ್ಲದೆ ವಸತಿಹೀನರಾಗಿದ್ದಾರೆ, ಜನಸಂಖ್ಯೆಗೆ ತಕ್ಕಂತೆ ಯಾವ ಸಮುದಾಯಗಳು ಎಷ್ಟು ನೌಕರಿ ಪಡೆದುಕೊಂಡಿದ್ದಾರೆ. ಸರ್ಕಾರದ ಯಾವ ಸೌಲಭ್ಯಗಳೂ ಸಿಗದೆ ವಂಚಿತರಾಗಿರುವವರನ್ನು ಸಮೀಕ್ಷೆಯ ಮೂಲಕ ಗುರುತಿಸಿ. ವಿವಿಧ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಮಾನದಂಡವಾಗಿಟ್ಟುಕೊಂಡು (Inter backwardness with empirical data) ಗುರುತಿಸಲಾದ ತರ್ಕಬದ್ಧ ದತ್ತಾಂಶಗಳ ಆಧಾರದ ಮೇಲೆ 101 ಪರಿಶಿಷ್ಟ ಜಾತಿಗಳನ್ನು ಗುಂಪುಗಳಾಗಿ ವಿಂಗಡಿಸಿ ಜಾತಿ-ಉಪಜಾತಿಗಳಿಗೆ ಸೂಕ್ತವಾದ 4 ಒಳಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿದ್ದಾರೆ. ಗ್ರೂಪ್ 1 ರಲ್ಲಿ ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ಶೇ. 6 ರಷ್ಟು, ಗ್ರೂಪ್ 2 ರಲ್ಲಿ ಹೊಲೆಯರು ಮತ್ತು ಸಂಬಂಧಿತ ಸಮುದಾಯಗಳಿಗೆ ಶೇ. 5 ರಷ್ಟು, ಗ್ರೂಪ್ 3 ರಲ್ಲಿ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳಿಗೆ ಶೇ. 3 ರಷ್ಟು ಹಾಗೂ ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾದ ಅಲೆಮಾರಿಗಳಿಗೆ ಶೇ. 1 | ರಷ್ಟು ಒಳಮೀಸಲಾತಿ ವರ್ಗೀಕರಣಕ್ಕಾಗಿ ಶಿಫಾರಸ್ಸು ಮಾಡಿ ಸರ್ಕಾರಕ್ಕೆ ದಿನಾಂಕ: 06.06.2012 ರಂದು ವರದಿಯನ್ನು ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಸದಾಶಿವ ಆಯೋಗವು ಆದಿಕರ್ನಾಟಕ, ಆದಿದ್ರಾವಿಡ ಮತ್ತು ಆದಿ ಆಂಧ್ರ ಎಂಬ ಜಾತಿಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಎಡಗೈ ಮತ್ತು ಬಲಗೈ ಸಮುದಾಯದ ಸಂಬಂಧಿತಉಪಸಮುದಾಯಗಳನ್ನು ಸರಿಯಾಗಿ ಗುರ್ತಿಸಿ ಯಾವುದೇ ಸಂಶಯಗಳು ಮತ್ತು ಗೊಂದಲಗಳು ಇಲ್ಲದೆ ವರದಿಯನ್ನು ನೀಡಿದ್ದಾರೆ. ಆದರೆ ನೀವು ವಿಳಂಬ ಮಾಡಿದ ನಮಗೆ ಸರಿ ಅನಿಸ್ತಾ ಇಲ್ಲ ಮುಂದಿನ ದಿನಗಳಲ್ಲಿ ನಾವು ತುಂಬಾ ಉಗ್ರ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡರ ಹಾಗೂ ಮಾದಿಗ ಸಂಘಟನೆ ಮುಖಂಡರು ಉಪಸ್ಥಿತರಿದ್ದರು
ಯೇಹಾನ್ ಡಿಸೋಜ ಚಿಲ್ಲರ್ಗಿ ಅಧ್ಯಕ್ಷರು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಬೀದರ್ ಇದ್ದರು.
ವರದಿ : ಜಾನ್ಸನ್ ಉಜನಿ