ಮುಂಡರಗಿ –
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ಘಟನೆ..
ಗ್ರಾಹಕನ ರೂಪದಲ್ಲಿ ಅಂಗಡಿಗೆ ಬಂದಿದ್ದ ಖದೀಮ..
ಅಂಗಡಿ ಮಾಲೀಕಳ ಗಮನ ಬೇರೆಡೆ ಸೆಳೆದು ಕತ್ತಲ್ಲಿದ್ದ ಮಾಂಗಲ್ಯ ಸರ್ ದೋಚಿ ಪರಾರಿ..
ಮಂಜುಳಾ ಮೋಹನ ಹಂಪಿ ಅನ್ನೋರ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿ..
ಬೆಳ್ಳಂಬೆಳಿಗ್ಗೆ ಗ್ರಾಹಕನಂತೆ ವರ್ತಿಸಿ 20 ಗ್ರಾಂ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿ..
ಕಳೆದ ವಾರವಷ್ಟೇ ವೃದ್ಧನ ಕೈಯಲ್ಲಿನ ಚಿನ್ನದ ರಿಂಗ್ ಎಗರಿಸಿದ್ದ ಖದೀಮರು..
ಇದೀಗ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ..
ಪಟ್ಟಣದಲ್ಲಿ ಹಾಡುಹಗಲೇ ಹೆಚ್ಚುತ್ತಿರುವ ಕಳ್ಳತನ..
ಹಗಲಿನಲ್ಲಿಯೂ ಹೊರಗಡೆ ಓಡಾಡೋಕೆ ಭಯ ಪಡ್ತಿರೋ ಪಟ್ಟಣದ ಜನರು..
ಇದಕ್ಕೆಲ್ಲ ಕಡಿವಾಣ ಹಾಕುವಂತೆ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಆಗ್ರಹ..