ಚಿಂಚೋಳಿ ತಾಲೂಕಿನ ಕೊಂಚಾವರಂ ಹಾಗೂ ಶಾದಿಪುರ ನ ವಲಯ ಜೀವಿ ಅರಣ್ಯ ದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಹಲವಾರು ತಿಂಗಳುಗಳಿಂದ ಇಲ್ಲಿ ಅಕ್ರಮ ಮಣ್ಣು ಕೊರೆಯುವ ಕೆಲಸ ನಡೆಯುತ್ತಿದ್ದರು ಗಡಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕುಳಿತು ಬಿಟ್ಟಿದ್ದಾರೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಬ್ರೇಕ್ ಹಾಕಬೇಕು ನಮ್ಮ ಸುಂದರವಾದ ಪರಿಸರವನ್ನು ಕಾಪಾಡಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರ ಮನವಿ ಮಾಡುತ್ತಿದ್ದಾರೆ.
ಶಾದೀಪುರ ವಲಯ ಅರಣ್ಯ ಜೀವಿ ಪ್ರದೇಶದ ರಸ್ತೆಯ ರಾತ್ರಿ ಸಮಯದಲ್ಲಿ ಅತಿ ಹೆಚ್ಚು ಓವರ್ ಲೋಡ್ ಕೆಂಪು ಮಣ್ಣಿನ ಟಿಪ್ಪರ್ ಗಳು ಯಗ್ಗಿಲ್ಲದೆ ತೆಗೆದುಕೊಂಡು ಹೋಗುತ್ತಾರೆ ವನ್ಯಜೀವಿಧಾಮದ ಪ್ರಾಣಿಗಳು ಸುರಕ್ಷತೆಯ ಚಿಂತೆ ಮಾಡದೆ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ ಇದರಿಂದ ರಸ್ತೆ ಈಗಾಗಲೇ ಹಾಳಾಗಿದ್ದು ವಾಹನ ಸವಾರರು ಅಪಘಾತಗಳು ಆಗಿ ಅನೇಕ ಮರಣಗಳು ಆಗಿದ್ದು ಕೈಕಾಲು ಮುರಿದುಕೊಂಡಿರುವ ಘಟನೆಗಳು ನಡೆದಿವೆ ಅಕ್ರಮ ಕೆಂಪು ಮಣ್ಣು ಸಾಗಾಟ ಯಾರಿಗೂ ಅಂಜದೆ ರಾಜಾರೋಷವಾಗಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಅಷ್ಟೊಂದು ದೊಡ್ಡ ಕೆಲಸವೇ ಎಂದು ಯಕ್ಷಪ್ರಶ್ನೆಯಾಗಿದೆ ? ಎಂದು ಪರಿಸರ ಪ್ರೇಮಿಗಳ ಮಾತುಗಳಾಗಿವೆ, ಇದರ ಹಿಂದೆ ರಾಜಕಾರಣಿಗಳು ಇರುವುದು ಅಷ್ಟೇ ಸತ್ಯ! ಅದಕ್ಕಾಗಿಯೇ ನಿರ್ಭೀತಿಯಿಂದ ಅಕ್ರಮ ಮಣ್ಣು ಸಾಗಾಟಗಾರರು ಕೆಂಪಣ್ಣನ್ನು ಓವರ್ ಲೋಡ್ ಮುಖಾಂತರ ಸಾಗಟ ನಡೆಸುತ್ತಿದ್ದಾರೆ. ಕೆಂಪು ಮಣ್ಣಿನ ಮಹತ್ವ ಏಕೆಂದರೆ ಕ್ಯಾಲ್ಸಿಯಂ ಮೆಗ್ನೀಷಿಯಂ ರಂಜಕ ಸಾರ್ವಜನಿಕ ಮತ್ತು ಹ್ಯೂಮಸ್ ಕಡಿಮೆ ಇರುತ್ತದೆ ಕೆಲವು ಭಾಗಗಳಲ್ಲಿ ಪೋಟಸಿಯಂ ಅಧಿಕವಾಗಿರುತ್ತದೆ. ಇದು ಹೊಲಗಳಲ್ಲಿ ದ್ವಿ ಧಾನ್ಯ ಹಾಗೂ ಬೆಳೆ ಬೆಳೆಯಲು ಒಳ್ಳೆಯ ಫಲವತ್ತಾದ ಮಣ್ಣು ಆಗಿದ್ದು ಅದೇ ರೀತಿ ಕಾರ್ಖಾನೆಗಳಿಗೂ ಅತಿ ಹೆಚ್ಚು ಕೆಂಪು ಮಣ್ಣು ಉಪಯುಕ್ತವಾಗಿದೆ. ಭೂ ಗಣಿ ವಿಜ್ಞಾನ ಡಿಡಿ ಅವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ , ಕುಂಚಾವರಂ ಹಾಗೂ ಶಾದಿ ಪುರಗಳಲ್ಲಿ ಯಾವುದೇ ರೀತಿಯ ಅಕ್ರಮ ಕೆಂಪು ಮಣ್ಣು ಸಾಗಾಟ ಕಂಡುಬಂದಿಲ್ಲ ಈಗಾಗಲೇ ನಾನು ಅಧಿಕಾರಿಗಳಿಗೆ ಕಳಿಸಿಕೊಟ್ಟಿದ್ದೇನೆ ಎಂದು ಹೇಳಿದರು. ತಾಲೂಕ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ಹೇಳುವಂತೆ ಕೆಂಪು ಮಣ್ಣಿನ ಅಧಿಕಾರ ಇರುವುದು ಭೂ ಮಾತು ಗಣಿ ವಿಜ್ಞಾನ ಇಲಾಖೆಗೆ ಸಂಬಂಧಿಸಿದ್ದು ಅದು ನೆರೆಯ ತೆಲಂಗಾಣದಿಂದ ಕೆಂಪು ಮಣ್ಣನ್ನು ಸಾಗಾಟ ಮಾಡುತ್ತಿದ್ದಾರೆ ಅಂತ ಯಾವುದೇ ಅಕ್ರಮ ಕೆಂಪು ಮಣ್ಣು ಸಾಗಾಟಗಳಿಂದ ಪ್ರಾಣಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು . ಪರಿಸರ ಪ್ರೇಮಿ ಸೂರ್ಯಕಾಂತ್ ಗಾರಂಪಳ್ಳಿ ಪ್ರತಿಕ್ರಿಯಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಕೈಕ ವನ್ಯಜೀವಿಧಾಮ ಇರುವುದು ನಮ್ಮ ತಾಲೂಕಿನಲ್ಲಿ ನೆರೆಯ ತಾಟೆಪಳ್ಳಿ ಹಾಗೂ ತೋರಮಾಮಡಿ ಪ್ರದೇಶಗಳಿಂದ ಕೆಂಪು ಮಣ್ಣನ್ನು ರಾತ್ರಿಯ ಸಮಯದಲ್ಲಿ ಅತಿ ಹೆಚ್ಚು ಸಾಗಾಟ ಮಾಡುತ್ತಿದ್ದು ನಮ್ಮ ವನ್ಯಧಾಮ ರಸ್ತೆ ಉಪಯೋಗಿಸುತ್ತಿದ್ದು ಓವರ್ ಲೋಡ್ ಟಿಪ್ಪರ್ ಗಳಿಂದ ರಸ್ತೆ ಹಾಳಾಗಿದ್ದು ಅನೇಕ ಅಪಘಾತಗಳಾಗಿವೆ ಸಾವನ್ನಪ್ಪಿವೆ ಪ್ರಾಣಿಗಳಿಗೂ ನಿತ್ಯ ನರಕ ಯಾತನೆಯಾಗಿದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇದ್ದರೆ ಸಾಕು ಕಾನೂನು ಚೌಕಟ್ಟಿನಲ್ಲಿ ಕೆಂಪು ಮಣ್ಣು ಸಾಗಾಟ ಮಾಡಿದರೆ ಒಳ್ಳೆಯದು ಎಂದು ಹೇಳಿದರು.
ವರದಿ :ರಾಜೇಂದ್ರ ಪ್ರಸಾದ್