ಔರಾದ್ : ಕಸಾಪ ವಿರುದ್ಧ ಕರವೇ ಆಕ್ರೋಶ

ಔರಾದ್ : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ವಿರುದ್ಧ ಕರವೇ ತಾಲೂಕು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿಭಾಗದ ಕನ್ನಡ ಬೆಳೆಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು ಇದನ್ನೂ ಬಿಟ್ಟು ಇಂಗ್ಲಿಷ್ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ‌ಕ್ಕೆ ಹಾಜರಾಗುತ್ತಾರೆ ಎಂದು ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕನ್ನಡ ಬ್ಯಾನರ್ ಶೇ 60 ಪ್ರಮಾಣದಲ್ಲಿ ಹಾಕುವಂತೆ ಹೋರಾಟ ಮಾಡುತ್ತಿದ್ದೇವೆ. ಇದರ ನಡುವೆ ಕಸಾಪ ಜಿಲ್ಲಧ್ಯಕ್ಷ ಸುರೇಶ ಚನ್ನಶೆಟ್ಟಿ ಕನ್ನಡ ಬ್ಯಾನರ್ ಇರುವ ಕಾರ್ಯಕ್ರಮದಲ್ಲಿ ಹಾಜರಾಗಿ ಕನ್ನಡದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ದೂರಿದರು.

 

ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಅನೇಕರು ಶಿಕ್ಷಕರಿದ್ದು, ಅವರ ಮಕ್ಕಳಿಗೆ ಆಂಗ್ಲ ಮಧ್ಯಮ ಶಾಲೆ ಕಳುಹಿಸುತ್ತಾರೆ. ತೋರಿಕೆಗೆ ಕನ್ನಡ ಅಭಿಮಾನ ತೋರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ಪ್ರವೇಶ ಪಡೆದ ಪರಿಷತ್ ಪದಾಧಿಕಾರಿಗಳನ್ನು ಕುಡಲೇ ಕೈಬಿಡಬೇಕು ಎಂದು ಒತ್ತಯಿಸಿದರು. ಗಡಿಭಾಗದ ಶಿಕ್ಷಕರಿಗೆ ಪರಿಷತ್ ಜವಾಬ್ದಾರಿ ನೀಡಿ ಮಕ್ಕಳ ಶಿಕ್ಷಣದ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿರುವ ಕನ್ನಡಪರ ಸಂಘಟನೆಯ ಪದಾಧಿಕಾರಿಗಳಿಗೆ, ಹೋರಾಟಗಾರರಿಗೆ ಪರಿಷತ್ ಕಡೆಕಣಿಸುತ್ತಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವರದಿ : ರಾಚಯ್ಯ ಸ್ವಾಮಿ 

error: Content is protected !!