ನೂತನ ಪುರಸಭೆ ಮುಖ್ಯ ಅಧಿಕಾರಿಯಾಗಿ ನಿಂಗಮ್ಮ ಬಿರಾದಾರ ಪದ ಗ್ರಹಣ

ಚಿಂಚೋಳಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನೂತನವಾಗಿ ಪುರಸಭೆ ಮುಖ್ಯ ಅಧಿಕಾರಿಯಾಗಿ ನಿಂಗಮ್ಮ ಬಿರಾದಾರ ಪದಗ್ರಹಣದಲ್ಲಿ ಅವರನ್ನು ಪುರಸಭೆ ಸಿಬ್ಬಂದಿಗಳು ಹಾಗೂ ಪುರಸಭೆ ಅಧ್ಯಕ್ಷರು ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು ಶಾಲುಹೊದಿಸಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಆನಂದ ಟೈಗರ ಪುರಸಭೆ ಉಪಾಧ್ಯಕ್ಷೆ ಸುಲ್ತಾನ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ, ಕಾಂಗ್ರೆಸ್ ಮುಖಂಡ ಆರ್ ಗಣಪತರಾವ, ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕ ಅಧ್ಯಕ್ಷ ಅನಿಲ ಬಿರಾದಾರ, ಪ್ರಧಾನ ಕಾರ್ಯದರ್ಶಿ ಹಾಗೂ ವ್ಯಾಯವಾದಿ ಸೂರ್ಯಕಾಂತ ಗಾರಂಪಳ್ಳಿ, ಪತ್ರಕರ್ತ ಹರ್ಷವರ್ಧನ ಚಿನ್ನ ಕಟ್ಟಿ, ವಿಶ್ವನಾಥ ಹೊಡ್ದೆಬೀರನಹಳ್ಳಿ, ಮಾಜಿ ಗ್ರಾ. ಪಂ. ಅಧ್ಯಕ್ಷ ವಿಲಾಸ, ಪುರಸಭೆ ಸಿಬ್ಬಂದಿಗಳಾದ ದೇವೇಂದ್ರಪ್ಪ, ಆನಂದ್ ಕಾಂಬಳೆ, ಶ್ರೀಕಾಂತ, ಜಗನ್ನಾಥ ಕಟ್ಟಿ, ಗುಂಡಪ್ಪ, ಹಾಗೂ ಇತರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!