ಗುಡಿಬಂಡೆ : ತಾಲ್ಲೂಕು ಆಡಳಿತ ಸೌಧದ ಮುಂಭಾಗ ಬುಧವಾರ ಮೈಕ್ರೋಫೈನಾನ್ಸ್ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೀಡುತ್ತಿರುವ ದೌರ್ಜನ್ಯ ದಬ್ಬಾಳಿಕೆ ಕಿರುಕುಳ ಖಂಡಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜನವಾದಿ ಮಹಿಳಾ ಸಂಘಟನೆ,ಸಿ.ಐ.ಟಿ.ಯು ಮತ್ತು ಸಿ ಪಿ ಐ (ಎಂ)ವತಿಯಿಂದ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು.
ಸಿ.ಐ.ಟಿ.ಯು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ.
ಈಗಾಗಲೇ ಗುಡಿಬಂಡೆ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗಿರೀಶ್ ಎಂಬ ಯುವಕ ಬಲಿಯಾಗಿದ್ದು.
ತಾಲ್ಲೂಕಿನಲ್ಲಿ ಹಲವಾರು ರೀತಿಯ ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು.ಆರ್.ಬಿ.ಐ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ನಿಯಮಬಾಹಿರವಾಗಿ ಕೆಲಸ ನಿರ್ವಹಿಸುತ್ತಿವೆ.
ಧರ್ಮದ ಹೆಸರಲ್ಲಿ ದೇವರ ಹೆಸರಿನಲ್ಲಿ.ಆರ್.ಬಿ.ಐ. ಅನುಮತಿ ಇಲ್ಲದೆಯೇ
ಅಧಿಕ ಬಡ್ಡಿಗೆ ಸಾಲ ನೀಡಿ
ವಾರದ ಬಡ್ಡಿ ವಿಧಿಸಿ
ಪ್ರತಿವಾರ ವಸೂಲಾತಿಗಾಗಿ ಮನೆ ಮುಂದೆ ಬಂದು ಬಲವಂತದ ವಸೂಲಾತಿ
ಸಾರ್ವಜನಿಕರ ಮುಂದೆ ಅವಮಾನ, ಮತ್ತು ಅಮಾನವೀಯವಾಗಿ ಸಾಲಗಾರರ ಹತ್ತಿರ ವರ್ತಿಸುತ್ತಿದ್ದಾರೆ, ಸಂಭಂದಪಟ್ಟ ಅಧಿಕಾರಿಗಳು
ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು,
ಧರ್ಮಸ್ಥಳ ಸಂಘದವರು ದೇವರ ಹೆಸರನ್ನು ಇಟ್ಟುಕೊಂಡು ಬಡವರಿಗೆ ಕಿರುಕುಳ ನೀಡಿ ದಂಧೆ ಮಾಡುತ್ತಿದ್ದಾರೆ.
ಇಂತಹ ಅಧರ್ಮದ ವಿರುದ್ಧ ಮಹಿಳೆಯರು ದಂಗೆ ಹೇಳಬೇಕು.
ಹಾಗೂ ಸಾಲವನ್ನು ಯಾರೂ ಕೂಡ ಮರುಪಾವತಿ ಮಾಡಬಾರದು.
ಹಾಗೂ ಆತ್ಮಹತ್ಯೆ ಅಂತ ನಿರ್ಧಾರಗಳನ್ನು ಮಾಡಬಾರದು.
ನಿಮ್ಮ ಜೊತೆಯಲ್ಲಿ ನಾವು ಇದ್ದೇವೆ ಎಂದರು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು.
ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಯಾವುದೇ ಅಡಮಾನ ಮತ್ತು ಬಡ್ಡಿ ಇಲ್ಲದೇ ಮಹಿಳೆಯರಿಗೆ ಸಾಲ ನೀಡಬೇಕು ಎಂದರು.
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ
ರಾಜ್ಯ ಉಪಾಧ್ಯಕ್ಷ ನರಸಿಂಹ ಗೌಡ.
ಹಕ್ಕು ಒತ್ತಾಯಗಳ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಓದಿ ತಿಳಿಸಿದರು.
ನಂತರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿ ಸ್ವೀಕರಿಸಿದ ಗುಡಿಬಂಡೆ ತಹಶೀಲ್ದಾರ್ ರವರು ನಮ್ಮ ಮನವಿಯನ್ನು ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದರು.
ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ
ಜಿಲ್ಲಾಧ್ಯಕ್ಷರಾದ
ಕೃಷ್ಣ ರೆಡ್ಡಿ ಜೆಎನ್ ನೇತೃತ್ವದಲ್ಲಿ
ಗುಡಿಬಂಡೆ ತಾಲೂಕಿನ ಆರಕ್ಷಕ ವೃತ್ತ ನಿರೀಕ್ಷಕರಾದ ನಯಾಜ್ ಬೇಗ್ ರವರನ್ನು ಭೇಟಿ ಮಾಡಿ
ಗುಡಿಬಂಡೆ ತಾಲೂಕಿನಲ್ಲಿ ಇರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಉಸ್ತುವಾರಿಗಳು ಹಾಗೂ ಕಲೆಕ್ಷನ್ ಏಜೆಂಟ್ ರವರುಗಳನ್ನು ಕರೆಸಿ
ಸಾಲಗಾರರ ಬಳಿ
ಸೌಜನ್ಯದಿಂದ ಸಮಾಧಾನದಿಂದ ಅಮಾನುಷವಾಗಿ ನಡೆದು ಕೊಳ್ಳದ ರೀತಿ ಸಾಲ ವಸೂಲಾತಿ ಮಾಡುವಂತೆ ಸಭೆ ಕರೆದು ಎಚ್ಚರಿಸುವಂತೆ ಮನವಿ ಸಲ್ಲಿಸಲಾಯಿತು.
ಸುಬ್ಬರಾಯಪ್ಪ
ಸಿ.ಪಿ.ಐ.ಎಂ
ಸಿ.ಐ.ಟಿ.ಯು
ಜನವಾದಿ ಮಹಿಳಾ ಸಂಘಟನೆ
ಹಾಗೂ
ಇದೇ ಸಂದರ್ಭದಲ್ಲಿ
ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.
ವರದಿ : ಜೆ.ಎನ್ ಕೃಷ್ಣಾ ರೆಡ್ಡಿ