ರಾಯಚೂರು : ಸ್ನೇಹಿತಳ ಮನೆಗೆ ಹೋಗುತ್ತೇನೆ ಎಂದು ಹೋದ ರಿಮ್ಸ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.
ಕಲಬುರಗಿ ಮೂಲದ ಎಂಎಸ್ ವಿದ್ಯಾರ್ಥಿನಿ ಡಾ.ಭಾಗ್ಯಲಕ್ಷ್ಮಿ ಕಾಣೆಯದ ವಿದ್ಯಾರ್ಥಿ ಕಳೆದ 15 ದಿನಗಳ ಹಿಂದೆ ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಳು.
ವಿದ್ಯಾರ್ಥಿನಿ ಸ್ನೇಹಿತರ ಮನೆ ಹೋಗುತ್ತೇನೆ ಎಂದು ಹೇಳಿ ಹೋದವಳು ಇನ್ನೂ ವಾಪಸ್ ಬಂದಿಲ್ಲ ಎಂದು ಆಕೆಯ ಪೋನ್ ಸ್ವಿಚ್ ಆಫ್ ಆಗಿದಕ್ಕೆ ಆತಂಕಗೊಂಡ ಪೋಷಕರು ಈಗ ಸ್ಥಳೀಯ ಮಾರ್ಕೆಟ್ ಯಾರ್ಡ್ ಠಾಣೆಗೆ ದೂರು ನೀಡಿದ್ದಾರೆ.
ವರದಿ : ಗಾರಲದಿನ್ನಿ ವೀರನಗೌಡ