1818 ನೇ ಇಸ್ವಿ ಜನೆವರಿ 1 ರಂದು ಮಹಾರಾಷ್ಟ್ರದ ಪೆಶ್ವೇ ರಾಜನ ಆಡಳಿತದಲ್ಲಿ ಅನ್ಯಾಯಕ್ಕೆ ಒಳಗಾದ ದಲಿತ ಜನರು ಸಿಡಿದೆದ್ದು, ಸುಮಾರು 28000 ಪೆಶ್ವೇ ಸೈನಿಕರ ವಿರುದ್ಧ 500 ಜನ ದಲಿತ ಹೋರಾಟಗಾರರು ಯುದ್ಧ ಮಾಡಿ ರಣ ರೋಚಕ ಗೆಲುವು ಸಾಧಿಸಿದ ದಿನದ ನೆನಪಿನಲ್ಲಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಕೋಡಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾಧ್ಯಕ್ಷರಾದ ಶಂಕರ ಪಾತರದ ನೇತೃತ್ವದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವೃತ್ತಿ ರಂಗದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಣ ಇಲಾಖೆ, ವೈದ್ಯಕೀಯ ಇಲಾಖೆ , ಪೊಲೀಸ್ ಇಲಾಖೆ , ಗ್ರಾಮ ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರಪ್ರಥಮ ಬಾರಿಗೆ ಸ್ವಾಭಿಮಾನಿ ಭೀಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಕಾರ್ಯಕ್ರಮದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್. ಎಚ್. ಕೋನರೆಡ್ಡಿ, ಎಫ್. ಎಚ್. ಜಕ್ಕಪ್ಪನವರ, ಅನಿಲಕುಮಾರ್ ಪಾಟೀಲ, ಮಾರುತಿ ದೊಡ್ಡಮನಿ, ರವೀಂದ್ರ ಕಲ್ಯಾಣಿ, ಉಡಚಪ್ಪ ಕಾಕಣ್ಣವರ, ಹನುಮಂತ ಕರಿಗಾರ,ರೋಹಿತ್ ಮತ್ತಿಹಳ್ಳಿ, ಮಲ್ಲಿಕಾರ್ಜುನ ಯಾತಗೇರಿ, ಪರಮೇಶ್ವರ್ ಕಾಳೆ, ನಾಗರಾಜ ಹೊಸಮನಿ, ಅಶೋಕ ಕಾಳಿ,ಮಲ್ಲಿಕಾರ್ಜುನ ಬಿಳಾರ, ಸಂತೋಷ ದೊಡ್ಡಮನಿ, ಸಂಗಮೇಶ ದೊಡ್ಡಮನಿ, ಲಕ್ಷ್ಮಣ ಚಲವಾದಿ, ರಂಜೀತ್ ಮಾನಕರ, ಸೋಮು ದಂಡಿನ, ಅಂಬೇಡ್ಕರ್ ಯುವಕ ಮಂಡಳದ ಸದಸ್ಯರು ಹಾಗೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು..