ಪೈರಿಂಗ್ ರೇಂಜ್ ತರಬೇತಿ ಕೇಂದ್ರ ಸತೀಶ್ ಜಾರಕಿಹೊಳಿ ಉದ್ಘಾಟನೆ

ಯಮಕನಮರಡಿ : ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದ ಪಾಶ್ಚಾಪೂರ ಗ್ರಾಮದ ಸಮೀಪದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಶೂಟಿಂಗ್ ತರಬೇತಿ ಕೇಂದ್ರವನ್ನು (ಫೈರಿಂಗ್ ರೇಂಜ್) ಉದ್ಘಾಟಿಸಿದರು
ನಮ್ಮ ಬೆಳಗಾವಿಯ

ಯಮಕನಮರಡಿ ಕ್ಷೇತ್ರದಲ್ಲಿ ಬರುವ ಪಾಶ್ಚಾಪೂರ ಗ್ರಾಮದ ಸಮೀಪದಲ್ಲಿ ಪೊಲೀಸ್ ಪೈರಿಂಗ್ ತರಬೇತಿ ಕೇಂದ್ರೀವನ್ನು ಇದೇ ಮೊದಲ ಬಾರಿಗೆ ಉದ್ಘಾಟಿಸಿದರು

ನಮ್ಮ ಯಮಕನಮರಡಿ ಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯ ಮಹತ್ವದ ತರಬೇತಿ ಕೇಂದ್ರ ಸ್ಥಾಪನೆಯಾಗಿರುವುದು ಸಂತಸವನ್ನು ತಂದಿದೆ.

ಈ‌ ವೇಳೆ ಬೆಳಗಾವಿ‌‌‌ ಜಿಲ್ಲೆ ಪೊಲೀಸ್ ಅಧಿಕ್ಷಕರಾದ ಡಾ. ಭೀಮಾಶಂಕರ ‌ಎಸ್. ಗುಳೇದ್, ಹೆಚ್ಚುವರಿ ಪೋಲಿಸ್ ಅಧಿಕ್ಷಕರು ಶ್ರೀ ಆರ್.ಬಿ. ಬಸರಗಿ, ಶ್ರೀ ಅಶೋಕ ಝಂಜರವಾಡ ಅವರು ಸೇರಿದಂತೆ ‌ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!