ಬಾವಿಯಲ್ಲಿ ಬಿದ್ದ ಹಸುವಿಗೆ ರಕ್ಷಿಸಿದ ಅಗ್ನಿಶಾಮಕ ದಳ ಸಿಬ್ಬಂದಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬಾವಿಯಲ್ಲಿಬಿದ್ದ ಹಸು ಯೊಂದನ್ನು ರಾಮದುರ್ಗ ಅಗ್ನಿಶಾಮಕ ದಳದ ಸಿಬ್ಬಂದಿ ಜಿವಂತ ಹೊರತೆಗೆದು ರಕ್ಷಿಣೆ  ನೀಡಿದ್ದಾರೆ.

ತಾಲೂಕಿನ ಸಾಲಹಳ್ಳಿ ಗ್ರಾಮದ ಹಣಮಂತರಾವ ಬಿದರಿ ಅವರ ಹೊಲದ ಬಾವಿಯಲ್ಲಿ ಬಿದ್ದ ಹಸುವಿನ ಕುರಿತು ಕರೆ ಬಂದ ತಕ್ಷಣ ಜಲ ವಾಹನ ಜೊತೆ ಅಧಿಕಾರಿ ಮತ್ತು ಸಿಬ್ಬಂದಿಗಳು ತೆರಳಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸವನ್ನು ಹೊರತೆಗೆದು ರಕ್ಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಂಜುನಾಥ ಹದ್ಲಿ, ಮಹಾಂತೇಶ ರಡ್ಡೆರ, ಕರಿಯಪ್ಪ ಕುರಿ, ಪ್ರಕಾಶ ಮೇಟಿ, m s ದಾಸರೆಡ್ಡಿ, ವಿನೋದ ಮುರಗೋಡ, M B ನೂರಪ್ಪನ್ನವರ ಕಾರ್ಯಾಚರಣೆಯಲ್ಲಿ ಇದ್ದರು.

 

ವರದಿ-Md ಸೋಹಿಲ್ ಭೈರಕದಾರ

error: Content is protected !!