ಅಥಣಿ : ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಭಾರತದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನು ಸಮಾಜ ಸೇವೆಗಾಗಿ ಅರ್ಪಿಸಿಕೊಂಡವರು ಮಾತೆ ಸಾವಿತ್ರಿಬಾಯಿ ಫುಲೆ ಅವರು ಅವರ ತ್ಯಾಗ ನಿಜಕ್ಕೂ ಶ್ಲಾಘನೀಯ ಎಂದು ಯುವ ಮುಖಂಡ ಚಿದಾನಂದ ಸವದಿ ಅವರು ಹೇಳಿದರು. ಅವರು ಅಥಣಿ ಪಟ್ಟಣದಲ್ಲಿ ಎಸ್ಎಂಎಸ್ ಪದವಿಪೂರ್ವ ಕಾಲೇಜ ಅಡಿಟೋರಿಯಂ ಹಾಲ್ ನಲ್ಲಿ ಜರುಗಿದ ಶ್ರೀಮತಿ ಸಾವಿತ್ರಿಬಾಯಿ ಫುಲೆ ಸಂಘಟನೆಯ ವತಿಯಿಂದ ಜರುಗಿದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ಭಾರತದ ಎಲ್ಲ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು ಪುರುಷರ ಸರಿಸಮಾನವಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ತೊಡಗಿಕೊಳ್ಳಲು ಪ್ರಮುಖ ಕಾರಣವೇ ಫುಲೆ ದಂಪತಿಗಳ ತ್ಯಾಗ ಬಲುದೊಡ್ಡದು ಹಾಗೂ ಅಥಣಿ ತಾಲೂಕಿನಲ್ಲಿ ಸಾವಿತ್ರಿಬಾಯಿ ಪುಲೆ ಸಂಘಟನೆ ಹುಟ್ಟಿಕೊಂಡಿದ್ದು ಹೆಮ್ಮೆಯ ಸಂಗತಿ ಮತ್ತು ಸಾವಿತ್ರಿಬಾಯಿ ಫುಲೆ ಸಂಘಟನೆಗೆ ನಮ್ಮ ಸಹಾಯ ಸಹಕಾರ ಯಾವತ್ತೂ ಇರುತ್ತದೆ ಎಂದು ಭರವಸೆ ನೀಡಿದರು. ಅನಂತರ ಉಪನ್ಯಾಸ ನೀಡಿದ ಶಿಕ್ಷಕಿ ಅರ್ಚನಾ ಅಥಣಿ ಮಾತನಾಡಿ ಭಾರತದ ಪ್ರತಿ ಮನೆಯ ಹೆಣ್ಣುಮಕ್ಕಳು ಸಾವಿತ್ರಿಬಾಯಿ ಫುಲೆ, ಮಹಾತ್ಮಾ ಜ್ಯೋತಿಬಾ ಫುಲೆ, ಫಾತೀಮಾ ಶೇಖ ಅವರ ತ್ಯಾಗವನ್ನು ಪ್ರತಿದಿನವೂ ಸ್ಮರಿಸಬೇಕು ಎಂದು ಕರೆ ನೀಡಿದರು. ಅನಂತರ ನೌಕರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಶ್ರೀಮತಿ ಕವಿತಾ ಸಾವಂತನವರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಸಂಘದ ತಾಲೂಕು ಘಟಕದ ಅಧ್ಯಕ್ಷೆ ರೇಣುಕಾ ಬಡಕಂಬಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಸೂರ್ಯವಂಶಿ, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ ಮುಜಾವರ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಬಸಪ್ಪ ಮೋಪಗಾರ, ಮಲ್ಲಿಕಾರ್ಜುನ ಪೂಜಾರಿ, ಶೋಭಾ ಪಾಟೀಲ, ಪರಿಮಳ ದಳವಾಯಿ, ಕುಂತಲ ಆಸ್ಕಿ, ಅನಿಲ ಗಸ್ತಿ, ನಾಗಪ್ಪ ಉಗಾರ, ರಂಜನಾ ಚೌಗಲಾ, ಆರತಿ ಖೋತ, ಪ್ರತಿಭಾ ನಿಡೋಣಿ, ವೈಶಾಲಿ ಕೊಂಡಿ, ಸುಮಿತ್ರಾ ಸಿಂಧೂರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಗಮೇಶ ಹಚ್ಚಡದ ನಿರೂಪಿಸಿ ವಂದಿಸಿದರು.
ವರದಿ ಭರತೇಶ ನಿಡೋಣಿ