ವಿಜಯಪುರ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅರಕೇರಿ ತಾಂಡಾ ನಂ.1ರಲ್ಲಿ ಇತ್ತೀಚಿಗೆ ನಡೆದ ಸತೀಶ ರಾಠೋಡ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಸಾಗರ @ ಸುರೇಶ ರಾಠೋಡ ಎಂಬಾತ ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್‌ಗಳನ್ನು ಅಕ್ರಮವಾಗಿ ತಂದು ಜಿಲ್ಲೆಯ ಹಲವು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಆತ ನೀಡಿದ ಮಾಹಿತಿ ಆಧರಿಸಿ ವಿವಿಧೆಡೆ ದಾಳಿ ನಡೆಸಿ ಕಂಟ್ರಿ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಹಲವು ವ್ಯಕ್ತಿಗಳಿಗೆ ಆರೋಪಿ ಸಾಗರ ಅಲಿಯಾಸ್ ಸುರೇಶ ರಾಠೋಡನು ₹50 ಸಾವಿರದಿಂದ ₹1 ಲಕ್ಷಕ್ಕೆ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡಿದ್ದನು ಎಂದು ತಿಳಿಸಿದರು.
ಪ್ರಕಾಶ ಮರ್ಕಿ ರಾಠೋಡ, ಸಾ: ಹಂಚಿನಾಳ ತಾಂಡಾ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು: 03 ವಿಜಯಪುರ ಗ್ರಾಮೀಣ ಠಾಣೆ, ಅಶೋಕ ಪರಮು ಪಾಂಡ್ರೆ, ಸಾ: ಕರಾಡ ದೊಡ್ಡಿ, ಅರಕೇರಿ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 02 ವಿಜಯಪುರ ಗ್ರಾಮೀಣ ಠಾಣೆ, ಸುಜಿತ ಸುಭಾಸ ರಾಠೋಡ, ಸಾ: ಕಡಕಿ ತಾಂಡಾ, ತಾ: ತುಳಜಾಪುರ ಜಿಲ್ಲಾ: ಸೊಲಾಪುರ, ಮಹಾರಾಷ್ಟ್ರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು: 01 ವಿಜಯಪುರ ಗ್ರಾಮೀಣ ಠಾಣೆ, ಸುಖದೇವ @ ಸುಖಿ ನರಸು ರಾಠೋಡ, ಸಾ: ಸಾಯಿ ಪಾರ್ಕ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 05 ಜಲನಗರ ಠಾಣೆ, ಪ್ರಕಾಶ ಭೀಮಸಿಂಗ್ ರಾಠೋಡ, ಸಾ: ನಾಗಾವಿ ತಾಂಡಾ, ತಾ: ಸಿಂದಗಿ ಇವರಿಂದ ಪಿಸ್ತೂಲ್: 01, ಜೀವಂತ ಗುಂಡು: 01 ಸಿಂದಗಿ ಠಾಣೆ, ಗಣೇಶ ಶಿವರಾಮ ಶೆಟ್ಟಿ, ಸಾ: ಬಸವನ ಬಾಗೇವಾಡಿ, ಪಿಸ್ತೂಲ್: 01, ಸಜೀವ ಗುಂಡು: 04 ಬಸವನ ಬಾಗೇವಾಡಿ ಠಾಣೆ, ಚನ್ನಪ್ಪಾ ಮಲ್ಲಪ್ಪ ನಾಗನೂರ, ಸಾ: ನೂಲ್ವಿ ತಾ: ಹುಬ್ಬಳ್ಳಿ ಹಾಲಿ: ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 04 ಆದರ್ಶನಗರ ಠಾಣೆ, ಸಂತೋಷ ಕಿಶನ್ ರಾಠೋಡ, ಸಾ: ಲೋಹಗಾಂವ ತಾಂಡಾ, ತಾ: ತಿಕೋಟಾ ಜಿ: ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 04 ತಿಕೋಟಾ ಠಾಣೆ, ಜನಾರ್ಧನ ವಸಂತ ಪವಾರ, ಸಾ: ಐತವಾಡೆ, ಜಿಲ್ಲಾ: ಸಾಂಗ್ಲಿ, ಮಹಾರಾಷ್ಟ್ರ ಇವರಿಂದ ಪಿಸ್ತೂಲ್ : 01 ವಿಜಯಪುರ ಗ್ರಾಮೀಣ ಠಾಣೆ, ಸಾಗರ ಸುರೇಶ ರಾಠೋಡ, ಸಾ: ಹಂಚನಾಳ ಎಲ್‌ಟಿ ನಂ: 1 (ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 40/2025 ರಲ್ಲಿ ಈಗಾಗಲೇ ಜಪ್ತ ಪಡಿಸಿಕೊಳ್ಳಲಾಗಿದೆ) ಪಿಸ್ತೂಲ್: 01 ಹೀಗೆ ಒಟ್ಟು ಪಿಸ್ತೂಲ್‌ಗಳು : 10 ಹಾಗೂ ಸಜೀವ ಗುಂಡುಗಳು : 24 ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು.
ವರದಿ : ಅಝೀಜ್ ಪಠಾಣ